ದಾವಣಗೆರೆ, ಜೂ.1- ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗೋಣಿವಾಡ ಕ್ಯಾಂಪ್, ಮತ್ತಿ, ಕತ್ತಲಗೆರೆ, ಕಾರಿಗನೂರು ಸೇರಿದಂತೆ, ಹಲವು ಗ್ರಾಮಗಳಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಬಿರುಗಾಳಿ ಮತ್ತು ಮಳೆಯಿಂದ ಬಡವರ ಮನೆಗಳು, ದೇವಸ್ಥಾನ, ಅಡಿಕೆ ತೋಟ, ತೆಂಗು, ಬಾಳೆ ಹಾಗೂ ಭತ್ತ ಬಹಳ ಹಾನಿಗೀಡಾ ಗಿರುವುದನ್ನು ತಿಳಿದ ಜಿ.ಪಂ. ಸದಸ್ಯ ಬಸವಂತಪ್ಪನವರು ಸ್ಥಳಕ್ಕೆ ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಕೇಳಿ, ರೈತರಿಗೆ ಸಾಂತ್ವನ ಹೇಳಿದರು. ಈಗಾಗಲೇ ಲಾಕ್ ಡೌನ್‌ನಿಂದ ರೈತರು ತಮ್ಮ ಫಸಲುಗಳಿಗೆ ಬೆಲೆ ಸಿಗದೇ ಇರುವುದರಿಂದ ಕಷ್ಟದಲ್ಲಿ ಸಿಲುಕಿದ್ದಾರೆ ಎಂದರು.
ರೈತರ ಕಷ್ಟವನ್ನು ಆಲಿಸಿ ಸಂಬಂಧಪಟ್ಟ ಅಧಿ ಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ಮಾಡಿ ನೊಂದ ರೈತರಿಗೆ ಸರ್ಕಾರ ದಿಂದ ಪರಿಹಾರ ನೀಡು ವಂತೆ ಕ್ರಮ ವಹಿಸಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿ ದರು.
ಈ ಸಂದರ್ಭದಲ್ಲಿ ಸರ್ಕಾರ ರೈತರ ಮೆಕ್ಕೆ ಜೋಳ, ಭತ್ತ ಇತರೆ ಫಸಲುಗಳನ್ನು ಖರೀದಿ ಮಾಡಲು ಅನೇಕ ನಿರ್ಬಂಧ ಹೇರಿರುತ್ತದೆ. ಆ ನಿರ್ಬಂಧಗಳನ್ನು ಸಡಿಲಗೊಳಿಸಿ ರೈತರು ಬೆಳೆದ ಮೆಕ್ಕೆ ಜೋಳ ಭತ್ತ, ಖರೀದಿ ಕೇಂದ್ರದ ಮುಖಾಂತರ ಖರೀದಿಸುವಂತೆ ಒತ್ತಾಯಿಸಿದರು. ಖರೀದಿ ಕೇಂದ್ರದ ನೋಂದಣಿ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೋಣಿವಾಡದ ಮುಖಂಡರಾದ ಮುರುಗೇಂದ್ರಪ್ಪ, ಅಡಿಕೆ ತೋಟ ಹಾನಿಗೀಡಾದ ಮಂಜುನಾಥ್, ಪರಶುರಾಮ್ ಹಾಗೂ ಇತರರಿದ್ದರು.