ಪಾಲಿಕೆ ಕಾಂಗ್ರೆಸ್ ಸದಸ್ಯರುಗಳಿಂದ ರಾಜನಹಳ್ಳಿ ಪಂಪ್‌ ಹೌಸ್ ವೀಕ್ಷಣೆ

ದಾವಣಗೆರೆ, ಜೂ. 1- ನಗರಕ್ಕೆ ನೀರು ಸರಬರಾಜು ಮಾಡುವ ರಾಜನಹಳ್ಳಿ ಪಂಪ್ ಹೌಸ್‌ಗೆ ಪಾಲಿಕೆ ವಿರೋಧ ಪಕ್ಷದ ಸದಸ್ಯರುಗಳು ಭೇಟಿ ನೀಡಿ, ಹೊಳೆಯಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಕಳೆದ ಐದಾರು ದಿನಗಳಿಂದ ನೀರಿನ ಮಟ್ಟ ಇಳಿಮುಖವಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಬರುವ ಸಾಧ್ಯತೆ ಇದ್ದು, ಶೀಘ್ರದಲ್ಲಿ ಒಡ್ಡು ಹಾಕಿ ನೀರನ್ನು ನಿಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಂಪ್ ಹೌಸ್‌ನಲ್ಲಿ ಒಂದು ಸಾವಿರ ಎಚ್.ಪಿ ಎರಡು ಮೋಟರ್‌ಗಳು, ಐದು ನೂರು ಎಚ್.ಪಿ ಮೂರು ಮೋಟರ್‌ಗಳಿದ್ದು, ಸಾವಿರ ಎಚ್.ಪಿ ಒಂದು ಮೋಟಾರ್ ಮಾತ್ರ ಚಾಲ್ತಿ ಇರುತ್ತದೆ. ಇನ್ನೊಂದು ರಿಪೇರಿಗೆ ಬಂದಿದ್ದು ಅಧಿಕಾರಿಗಳು ಶೀಘ್ರದಲ್ಲೇ ಸರಿ ಮಾಡಿಸಬೇಕು ಎಂದು ತಿಳಿಸಿದರು. 

ಒಡ್ಡು ಹಾಕಿ ನೀರು ನಿಲ್ಲಿಸಿದರೆ ಮಾತ್ರ  ಐದು ನೂರು ಎಚ್.ಪಿ ಮೂರು ಮೋಟರ್‌ಗಳು ಪ್ರಾರಂಭಿಸಲು ಸಾಧ್ಯ. ಆಗ ಮಾತ್ರ ನಗರಕ್ಕೆ ಸುಸಜ್ಜಿತವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತದೆ.  ಶೀಘ್ರ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ಅಧಿ ಕಾರಿಗಳಿಗೆ ಸೂಚಿಸಿದರು.

ನಂತರ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್‌ ಅವರ ಮುಂದಾಲೋಚನೆ ಯಿಂದ  ಹೊಳೆಯಲ್ಲಿ ನಿರ್ಮಾಣವಾಗುತ್ತಿರುವ ಜಲ ಸಿರಿ ಯೋಜ ನೆಯ 24×7  ಕುಡಿಯುವ ನೀರಿಗಾಗಿ ನಿರ್ಮಾಣ ವಾಗುತ್ತಿರುವ  ಬ್ಯಾರೇಜ್ ಕಾಮಗಾರಿಯನ್ನು ಪರಿಶೀಲನೆ ಮಾಡಿ, ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಪಡೆದು ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಬ್ಯಾರೇಜ್ 76 ಕೋಟಿ 11 ಲಕ್ಷದ ಯೋಜನೆಯಾಗಿತ್ತು. 2 ವರ್ಷದ ಕಾಲಮಿತಿ ಒಳಗಡೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಸದಸ್ಯರುಗಳಾದ ಗಡಿ  ಮಂಜುನಾಥ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ವಿನಾಯಕ, ಕಲ್ಲಳ್ಳಿ ನಾಗರಾಜ್, ಪಕ್ಷದ ಮುಖಂಡರುಗಳಾದ ಇಟ್ಟಿಗುಡಿ ಮಂಜುನಾಥ್, ಉಮೇಶ್, ಹುಲ್ಮನಿ ಗಣೇಶ್, ಶಫಿ ಪಂಡಿತ್, ಕೆ.ಎಲ್.ಹರೀಶ್ ಬಸಾಪುರ  ಉಪಸ್ಥಿತರಿದ್ದರು.

error: Content is protected !!