ಅಂಗನವಾಡಿ ಕಾರ್ಯಕರ್ತೆಯರಿಂದ ಚಲೋ

ದಾವಣಗೆರೆ, ಆ.24- ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ  ನಾಳೆ ದಿನಾಂಕ 25ರಂದು ವಿಧಾನ ಸೌಧ ಚಲೋ ಮೂಲಕ ಅನಿರ್ದಿಷ್ಟಾವಧಿಯ ಹೋರಾಟ ಹಮ್ಮಿಕೊಳ್ಳಲಾಗುತ್ತಿದ್ದು, ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯು ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಫಾರಸ್ಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಕೋಳಿ ಮೊಟ್ಟೆ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸಿ, ಇಲಾಖೆಯಿಂದಲೇ ಮೊಟ್ಟೆ ಸರಬರಾಜು ಮಾಡಬೇಕು. ಇದಲ್ಲದೇ ಮಾದರಿಯ ಶೂನ್ಯ ಶುಲ್ಕದ ಉಪಖಾತೆಗಳನ್ನು ತೆರೆಯುವ ಪ್ರಸ್ತಾಪವನ್ನು ನಿಲ್ಲಿಸಬೇಕು ಎಂದು ಸಮಿತಿಯಿಂದ ಒತ್ತಾಯಿಸಲಾಯಿತು ಎಂದು ಜಿಲ್ಲಾ ಸಂಚಾಲಕಿ ಲತಾಬಾಯಿ ತಿಳಿಸಿದ್ದಾರೆ.

ಈ ವೇಳೆ ಸುಮಿತ್ರ, ರಷೀದಾ, ನೀಲಮ್ಮ ಸೇರಿದಂತೆ ಇತರರು ಇದ್ದರು.      

error: Content is protected !!