ಮೆಕ್ಕೆಜೋಳ, ತೊಗರಿ ಪ್ರಾತ್ಯಕ್ಷಿಕೆ

ದಾವಣಗೆರೆ, ಆ.23- ನಗರದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಿಂದ ತಾಲ್ಲೂಕಿನ ಅಗಸನಕಟ್ಟೆ ಗ್ರಾಮದಲ್ಲಿ ಮೆಕ್ಕೆಜೋಳ, ತೊಗರಿ ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. 

ತೊಗರಿ ಬೆಳೆಯಲ್ಲಿ ಗೂಡು ಮಾರು ಹುಳುವಿನ ಬಾಧೆ ಕಂಡುಬಂದಲ್ಲಿ ಪ್ರಫೆನೋಫಾಸ್ 2 ಎಂ.ಎಲ್‌ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ, ಸಿಂಪರಣೆ ಮಾಡುವುದರಿಂದ ಈ ಕೀಟವನ್ನು ಹತೋಟಿ ಮಾಡಬಹುದೆಂದು ಕೇಂದ್ರದ ವಿಜ್ಞಾನಿ ಹೆಚ್.ಎಂ. ಸಣ್ಣ ಗೌಡರು ಮಾಹಿತಿ ಒದಗಿಸಿದರು. ಈ ಸಂದರ್ಭ ದಲ್ಲಿ ಬೆಳೆಯ 60 ದಿವಸದ ನಂತರ ತೊಗರಿಯಲ್ಲಿ ಕುಡಿ ಚಿವುಟುವುದರಿಂದ ಅರೆ ಕೊಂಬುಗಳು ಜಾಸ್ತಿಯಾಗಿ ಇಳುವರಿ ಹೆಚ್ಚುತ್ತದೆ ಎಂದು ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಅವರು ಮಾಹಿತಿಯನ್ನು ಒದಗಿಸಿದರು. 

error: Content is protected !!