400 ಜನರಿಗೆ ಕೋವಿಡ್ ಲಸಿಕೆ

ದಾವಣಗೆರೆ, ಆ.30 – ಕೊರೊನಾ ಲಸಿಕೆ ಹಾಕಿಸುವ ಮುಖೇನ ಅವರುಗಳ ಆರೋಗ್ಯದ ಕಾಳಜಿಯನ್ನು 24ನೇ ವಾರ್ಡಿನ ಪಾಲಿಕೆ ಸದಸ್ಯ ಕೆ. ಪ್ರಸನ್ನ ಕುಮಾರ್ ಮೆರೆದಿದ್ದಾರೆ.

ಬ್ಯಾಡಗಿ ಶೆಟ್ರು ಶಾಲೆಯಲ್ಲಿ ಪ್ರಸನ್ನ ಕುಮಾರ್ ಅವರು ವಾರ್ಡಿನ ಸುಮಾರು 400ಕ್ಕೂ ಅಧಿಕ ಜನರಿಗೆ ನೀಡಿದ ಮೊದಲನೇ ಹಾಗೂ ಎರಡನೇ ಹಂತದ ಕೋವಿಶೀಲ್ಡ್ ಲಸಿಕೆ ಯಶಸ್ವಿಯಾಯಿತು. 

ವಾರ್ಡುಗಳಲ್ಲಿ ಕೋವಿಡ್ ಲಸಿಕಾ ಶಿಬಿರಗಳನ್ನು ಆಯೋಜಿಸಿದರೆ ಜನರು ಲಸಿಕೆಗಾಗಿ ಅಲೆದಾಡುವ, ದೂರದ ಇತರೆಡೆಗಳಲ್ಲಿ ಲಸಿಕೆ ಪಡೆಯಲು ಹರಸಾಹಸ ಪಡುವ ಕಠಿಣ ಸಂದರ್ಭದ ಪ್ರಮೇಯವೇ ಎದುರಾಗದು ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ‌ ಬಂತು. ಅಲ್ಲದೇ ಪ್ರಸನ್ನ ಕುಮಾರ್ ಅವರ ಈ ಸೇವಾ ಕಾರ್ಯಕ್ಕೆ ವಾರ್ಡಿನ ನಾಗರಿಕರು ಮೆಚ್ಚುಗೆಯ ಜೊತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಪ್ರಮುಖರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮಹಾಶಕ್ತಿ ಕೇಂದ್ರದ ಪ್ರಮುಖ ಪದ್ಮನಾಭ ಶೆಟ್ಟಿ, ಬ್ಯಾಡಗಿ ಶೆಟ್ರು ಶಾಲೆಯ ಕಾರ್ಯದರ್ಶಿ ಆನಂತರಾಮ ಶೆಟ್ಟಿ, ಯೋಜನಾ ಕಾರ್ಯದರ್ಶಿ ನಾಗರಾಜ್ ಕಾಸಲ್, ಬಿಜೆಪಿ ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ವಾರ್ಡಿನ ಪ್ರಮುಖರಾದ  ಶಂಕರ್ ಪಿಸಾಳೆ,  ಉಷಾ ಪದ್ಮನಾಭ, ಕಿರಣ್, ಸಿದ್ದು, ಮಧು, ಅನಿಲ್, ಸೋಹನ್ ರೆವಣ್ಕರ್, ವಿವೇಕ್, ಸೂರಜ್, ಸಾಗರ್, ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!