ಸಭೆಗೆ ಗೈರಾದ ಬಸ್ ಡಿಪೋ ಮ್ಯಾನೇಜರ್

ಜೆಇಗೆ ನೋಟಿಸ್ ಜಾರಿಗೊಳಿಸುವಂತೆ ತಹಶೀಲ್ದಾರ್‍ ಆದೇಶ

ಹೊನ್ನಾಳಿ, ಫೆ.27 – ಪೋಕ್ಸೋ ಕಾಯ್ದೆಯ ಸರಿಯಾದ ತಿಳಿವಳಿಕೆ ಇಲ್ಲದೇ ಎಸ್ಸಿ-ಎಸ್ಟಿ ಜನಾಂಗದ ಜನತೆ ಅನೇಕ ತೊಂದರೆ ಅನುಭವಿಸುವಂತಾಗಿದೆ. ಇದನ್ನು ಸರಳೀಕರಣ ಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ದಿಡಗೂರು ರುದ್ರೇಶ್‍ ಅಧಿಕಾರಿಗಳನ್ನು ಒತ್ತಾಯಿಸಿದ ಪ್ರಸಂಗ ನಡೆಯಿತು.

ಹೊನ್ನಾಳಿಯಲ್ಲಿ ಇತ್ತೀಚಿಗೆ ನಡೆದ ಎಸ್ಸಿ – ಎಸ್ಟಿ ಜನಾಂಗದ ಕುಂದು – ಕೊರತೆಗಳ ತ್ರೈಮಾ ಸಿಕ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಹುಡುಗ-ಹುಡುಗಿ ಪ್ರೀತಿಯ ಮಧ್ಯೆ ಯಾರದು ತಪ್ಪೆಂದು ಹೇಳಲು ಆಗುವು ದಿಲ್ಲ. ಇದರಲ್ಲಿ ಬ್ಲ್ಯಾಕ್‌ಮೇಲ್‍ಗಳ ಸಾಧ್ಯತೆ ಇದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ಎಲ್ಲ ಇಂತಹ ಪ್ರಕರಣಗಳನ್ನು ಒಂದೇ ರೀತಿಯಲ್ಲಿ ಅಧಿಕಾರಿಗಳು  ಕಾಣುವುದ ರಿಂದ ಸಮಾಜದಲ್ಲಿ ಹೆಚ್ಚು ಅನಾಹುತ ಗಳನ್ನು ಕಾಣುತ್ತಿವೆ. ಇಂತಹ 37 ಪ್ರಕರಣಗಳಿವೆ ಎಂದಾಗ ಅಧಿಕಾರಿಗಳು ಚಿಂತನೆ ನಡೆಸುವುದಾಗಿ ಹೇಳಿದರು.

ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸರಿ ಯಾದ ಸಮಯಕ್ಕೆ ಬಸ್‍ಗಳ ಸೌಕರ್ಯವಿರದೇ ಘಂಟ್ಯಾಪುರ ಹಾಗೂ ಕೋಣನತಲೆ ಗ್ರಾಮಗಳಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಕೋಣನತಲೆ ನಾಗಪ್ಪ ಪ್ರಶ್ನಿಸಿದಾಗ ಇದಕ್ಕೆ ಸಭೆಗೆ ಬಸ್ ಡಿಪೋ ಅಧಿಕಾರಿ ಬರದೇ ಇಲಾಖೆಯ ಸೂಪರ್ ವೈಜರ್ ಬಂದಿದ್ದು, ಮಾಹಿತಿ ಸರಿಯಾಗಿ ನೀಡದೆ, ತಮ್ಮ ಹಿರಿಯ ಅಧಿಕಾರಿಗಳು ಸಭೆಗೆ ಹೋಗಿದ್ದಾರೆ ಎಂದಾಗ ಯಾವ ಸಭೆ ಎಂದು ತಹಶೀಲ್ದಾರ್‍ ಪ್ರಶ್ನಿಸಿದರು. ಸರಿಯಾದ ಉತ್ತರ ಬರದಿದ್ದರಿಂದ ಅವರಿಗೆ ನೋಟಿಸ್ ಕಳಿಸುವಂತೆ ಆದೇಶ ಮಾಡಿದರು.

ತಾಲ್ಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ, ಅಂಬೇಡ್ಕರ್ ಹಾಗೂ ಮದಕರಿ ವೃತ್ತ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗಕ್ಕೆ ಬ್ಯಾಂಕುಗಳಲ್ಲಿ ಸಿಗುವ ಸಬ್ಸಿಡಿ ಕಡಿತ, ತಾಲ್ಲೂಕಿನ ಸಾಸ್ವೆಹಳ್ಳಿ ಹಾಗೂ ಟಿ.ಬಿ.ವೃತ್ತದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗೂ ಬಹುಮುಖ್ಯವಾಗಿ ಅವಳಿ ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲೂ ಎಸ್ಸಿ-ಎಸ್ಟಿ ಜನಾಂಗಕ್ಕೆ ಸ್ಮಶಾನ ಇಲ್ಲ. ಕೂಡಲೇ ಪ್ರತಿ ಗ್ರಾಮದಲ್ಲೂ ಸ್ಮಶಾನಕ್ಕೆ ಜಾಗ ಮೀಸಲಿರುವಂತೆ ದಲಿತ ಮುಖಂಡರು ಆಗ್ರಹಿಸಿದರು.

ಬಂಜಾರ ಸಮಾಜದ ತಾಲ್ಲೂಕು ಅಧ್ಯಕ್ಷ ಜುಂಜಾನಾಯ್ಕ್ ಮಾತನಾಡಿ, ಎಸ್ಸಿ ಜನಾಂಗವೇ ಹೆಚ್ಚಾಗಿರುವ ಹನುಮಸಾಗರ ಕೆಳಗಿನ ತಾಂಡಾದ ಸರ್ವೆ ನಂ.7ರ 4 ಎಕರೆ 7 ಗುಂಟೆ ಪ್ರದೇಶದಲ್ಲಿ ಸ್ಮಶಾನಕ್ಕೆ ದಾರಿಯಿರದೆ ಅನೇಕ ತೊಂದರೆ ಅನು ಭವಿಸುತ್ತಿ ದ್ದೇವೆ. ಸಂಬಂಧಪಟ್ಟ ಅಧಿಕಾರಿ ಜೆಇ ಗಿರೀಶ್ ಸ್ಪಂದಿಸುತ್ತಿಲ್ಲ. ಸಭೆಯಲ್ಲಿದ್ದೇವೆ ಎನ್ನುತ್ತಾ 2 ತಿಂಗಳಿನಿಂದ ಹಾರಿಕೆ ಉತ್ತರಗಳೇ ಬರುತ್ತಿವೆ.

ಅಧ್ಯಕ್ಷನಾದ ನನ್ನ ಗ್ರಾಮದ ಸಮಸ್ಯೆಗೆ ನೀವು ಸ್ಪಂದಿಸುತ್ತಿಲ್ಲ ಎಂದು ಸಭೆಯ ಲ್ಲಿದ್ದ ಇಓ ಅವರನ್ನು ತರಾಟೆ ತಗೆದುಕೊಂಡರು.

ಇದಕ್ಕೆ ತಹಶೀಲ್ದಾರ್‌ರು, ಜೆಇ ಗಿರೀಶ್‍ರವರ ವರ್ತನೆ ಸುಧಾರಣೆಯಾಗಲಿ. ಸಭೆಗೆ  ಗೈರಾಗಿರುವ  ಅವರಿಗೂ ಈ ಬಗ್ಗೆ ನೋಟಿಸ್ ನೀಡಿ. ಇಓ ರವರು ತಕ್ಷಣವೇ ಇದ್ದಕ್ಕೆ ಪರಿಹಾರ ದೊರಕಿಸಿ ಕೊಡುವಂತೆ ಸಭೆಯಲ್ಲಿ  ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಬಸವನಗೌಡ, ಇಓ ಗಂಗಾಧರ್‍ ಮೂರ್ತಿ, ಬಿಇಒ ರಾಜೀವ್, ಎಸ್ ಐ ಬಸನಗೌಡ, ಸಮಾಜ ಕಲ್ಯಾಣ ಇಲಾಖೆ ದೊಡ್ಡ ಬಸಪ್ಪ, ಕೆಇಬಿ ಇಂಜಿನಿಯರ್ ಕಿರಣ್ ಕುಮಾರ್, ಡಾ.ಕೆಂಚಪ್ಪ, ಎಸ್ಸಿ-ಎಸ್ಟಿ ಜನಾಂಗದ ಮುಖಂಡ ರಾದ ಕೆಂಗಲಹಳ್ಳಿ ಪ್ರಭಾಕರ್, ದಿಡ ಗೂರು ತಮ್ಮಣ್ಣ, ಮಾರಿಕೊಪ್ಪ ಮಂಜುನಾಥ್, ರಾಜಣ್ಣ, ಬಂಜಾರ್ ಸಮಾಜದ ಅಧ್ಯಕ್ಷ ಜುಂಜಾ ನಾಯ್ಕ, ದಿಡಗೂರು ರುದ್ರೇಶ್, ಕಾಂತ್ ರಾಜ್, ಸೊರ ಟೂರು ಹನುಮಂ ತಪ್ಪ, ಕ್ಯಾಸಿನಕೆರೆ ಕಾಂತರಾಜ್, ಕೋಣನತಲೆ ನಾಗಪ್ಪ ಹಾಗೂ ಇತರರಿದ್ದರು.

error: Content is protected !!