ಜಿಗಳಿಯಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಎಂ. ಉಮ್ಮಣ್ಣ ಅಭಿಮತ
ಮಲೇಬೆನ್ನೂರು, ಏ.18- ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹರಿಹರ ತಾಲ್ಲೂಕಿನ ಹಳ್ಳಿ-ಹಳ್ಳಿಗಳಲ್ಲೂ ಕೂಡ 45 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಗ್ರಾ.ಪಂ. ಆಡಳಿತ ಮಂಡಳಿ, ಪಿಡಿಒ ಹಾಗೂ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ತೆರಳಿ ಜನರಿಗೆ ಮನವೊಲಿಸುತ್ತಿದ್ದಾರೆ.
ಜಿಗಳಿ, ಕೊಕ್ಕನೂರು, ಹೊಳೆಸಿರಿಗೆರೆ, ಉಕ್ಕಡಗಾತ್ರಿ, ಗ್ರಾಮಗಳಲ್ಲಿ ಕೋವಿಡ್ ಲಸಿಕೆ ನೀಡಲಾಗಿದ್ದು, ಬುಧವಾರ ಕೆ.ಎನ್. ಹಳ್ಳಿ, ನಂದಿಗಾವಿ, ಹೊಸಳ್ಳಿ ಗ್ರಾಮಗಳ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಉಮ್ಮಣ್ಣ ಜನತಾವಾಣಿಗೆ ತಿಳಿಸಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಯಾವುದೇ ರೋಗ ಲಕ್ಷಣ ಕಂಡು ಬಂದರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಅವರು ಮನವಿ ಮಾಡಿದ್ದಾರೆ. ಲಸಿಕೆ ಬಗ್ಗೆ ಭಯ ಬೇಡ. ಕೊರೊನಾ ಹೊಡೆದೋಡಿ ಸಲು ಲಸಿಕೆ ಸಹಕಾರಿ ಆಗಲಿದೆ. ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.
ಇದೇ ವೇಳೆ 70 ಜನರಿಗೆ ಲಸಿಕೆ ಹಾಕಲಾಯಿತು. ಆರ್ಬಿಎಸ್ಕೆ ವೈದ್ಯಾಧಿ ಕಾರಿ ಡಾ. ವಿಶ್ವನಾಥ್ ಕುಂದಗೋಳ, ಪಿಡಿಒ ದಾಸರ ರವಿ, ಆರೋಗ್ಯ ಸಿಬ್ಬಂದಿ ಗಳಾದ ಪ್ರಹ್ಲಾದ್, ಆರೋಗ್ಯವಾಣಿ, ಬಿಲ್ ಕಲೆಕ್ಟರ್ ಬಿ. ಮೌನೇಶ್, ಆಶಾ ಕಾರ್ಯ ಕರ್ತೆಯರಾದ ವನಜಾಕ್ಷಿ, ಶಂಕ್ರಮ್ಮ, ಲತಾ, ನೇತ್ರಾವತಿ, ಅಂಗನವಾಡಿ ಕಾರ್ಯಕರ್ತೆಯರಾದ ಸುವರ್ಣ, ಚಂದ್ರಮ್ಮ, ಗ್ರಾ.ಪಂ. ಕಾರ್ಯದರ್ಶಿ ಶೇಖರ ನಾಯ್ಕ್ ಹಾಜರಿದ್ದರು.