ದಾವಣಗೆರೆ, ಜ. 9 – ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ವತಿಯಿಂದ ಈಚೆಗೆ ನಡೆದ ಸ್ಟೇಟ್ ಜ್ಯೂನಿಯರ್ ಚಾಂಪಿಯನ್ ಶಿಪ್‍ನಲ್ಲಿ ದಾವಣಗೆರೆ ಬ್ಯಾಸ್ಕೆಟ್ ಬಾಲ್ ಕ್ಲಬ್ ತೃತೀಯ ಸ್ಥಾನ ಪಡೆದಿದೆ. ಈ ಚಾಂಪಿಯನ್ ಶಿಪ್‍ನಲ್ಲಿ ರಾಜ್ಯದ 58 ಕ್ಲಬ್‍ಗಳು ಭಾಗವಹಿಸಿದ್ದವು ಇದರಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ತಂಡ ಮೊದಲು 4 ಪಂದ್ಯ ನಾಕೌಟ್ ಮಾದರಿಯಲ್ಲಿ ಆಡಿ ನಂತರ ಲೀಗ್ ಪಂದ್ಯಕ್ಕೆ ಅರ್ಹತೆ ಪಡೆದು ತೃತೀಯ ಸ್ಥಾನ ಪಡೆದಿದೆ.
December 28, 2024