ಅನಿತಾ ಕೌಲ್ ರಾಜ್ಯಮಟ್ಟದ ಪ್ರಶಸ್ತಿ

ಅನಿತಾ ಕೌಲ್ ರಾಜ್ಯಮಟ್ಟದ ಪ್ರಶಸ್ತಿ - Janathavaniಮಲೇಬೆನ್ನೂರು, ಡಿ.29- ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕೊಡಮಾಡುವ 2023ನೇ ಸಾಲಿನ ಅನಿತಾ ಕೌಲ್ (ರಾಜ್ಯದ ನಿವೃತ್ತ ಹಾಗೂ ದಿವಂಗತ ಐಎಎಸ್ ಅಧಿಕಾರಿ) ರಾಜ್ಯಮಟ್ಟದ ಪ್ರಶಸ್ತಿಗೆ ರಾಜನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕಮದೋಡು ನಾಗಪ್ಪ ಮತ್ತು ಹಿಂಡಸಘಟ್ಟ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅರುಣ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಯನ್ನು ಮಲೆಬೆನ್ನೂರಿನ ಪಿಡಬ್ಲ್ಯೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಡಾ. ಸಿ.ಆರ್.ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಈ.ಬಸವರಾಜು  ತಿಳಿಸಿದ್ದಾರೆ.

error: Content is protected !!