ಬೇಸಿಗೆ ಶಿಬಿರ : `ಮಕ್ಕಳ ಸಂತೆ ಸ್ಪರ್ಧೆ’

ದಾವಣಗೆರೆ, ಏ. 9- ಅನ್ವೇಷಕರು  ಆರ್ಟ್ ಫೌಂಡೇಶನ್ ವತಿಯಿಂದ  ಇದೇ ದಿನಾಂಕ 3 ರಿಂದ ಆರಂಭಗೊಂಡ ಮಕ್ಕಳ ಬೇಸಿಗೆ ಶಿಬಿರವು 23 ರವರೆಗೆ ನಡೆಯಲಿದ್ದು, ಈ ಶಿಬಿರದ ಪ್ರಯುಕ್ತ ಮಕ್ಕಳ ಸಂತೆ ಸ್ಪರ್ಧೆ ಸಹ ಆಯೋಜಿಸಲಾಗಿದೆ ಎಂದು ಸಂಚಾಲಕ ಎಸ್.ಎಸ್. ಸಿದ್ಧರಾಜು ತಿಳಿಸಿದ್ದಾರೆ. 

ಸ್ಪರ್ಧಾ ವಿಜೇತರಿಗೆ ಪ್ರಥಮ 5000, ದ್ವಿತೀಯ 3000, ತೃತೀಯ 2000 ಹಾಗೂ ಎರಡು ಸಮಾಧಾನಕರ 1000  ರೂ. ನಗದು ಬಹುಮಾನ ನೀಡಲಾಗುವುದು. ಮಕ್ಕಳಲ್ಲಿ ವಾಕ್‌ಚಾತುರ್ಯ, ಹಣಕಾಸು ವ್ಯವಹಾರಗಳ ಗ್ರಹಿಕೆ, ಕೌಶಲ್ಯ, ಸಾಮರ್ಥ್ಯ, ತಲ್ಲೀನತೆ, ಆತ್ಮವಿಶ್ವಾಸ ಹೆಚ್ಚಿಸಲಿದ್ದು, ಇದೇ ದಿನಾಂಕ 16 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆಗೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮಕ್ಕಳ ಸಂತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9844268176 ಗೆ ಸಂಪರ್ಕಿಸಬಹುದು.

error: Content is protected !!