ರಪನಹಳ್ಳಿ, ಏ. 7- ಕಳೆದ ಒಂದು ವರ್ಷದ ಹಿಂದೆ ತಾಲ್ಲೂಕಿನ ಯು.ಬೇವಿನಹಳ್ಳಿ ದೊಡ್ಡ ತಾಂಡಾದ ಬಳಿ ನಡೆದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಇಲ್ಲಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದಾವಣಗೆರೆಯ ಲೆನಿನ್ ನಗರದ 36 ವರ್ಷದ ಶಿವಪ್ಪ ಬಂಧಿತ ಆರೋಪಿ. ಯು.ಬೇವಿನಹಳ್ಳಿ ದೊಡ್ಡ ತಾಂಡಾದ ಬಳಿ ದಾವಣಗೆರೆಯ ಜಿಮ್ ಟ್ರೇನರ್ ಧನ್ಯಕುಮಾರ ನ ಕೊಲೆಯಾಗಿತ್ತು.
8 ಜನ ಆರೋಪಿಗಳಲ್ಲಿ ಶಿವಪ್ಪ ಮಾತ್ರ ತಲೆ ಮರೆಸಿಕೊಂಡಿದ್ದನು. ಪಟ್ಟಣದ ನ್ಯಾಯಾಲಯಕ್ಕೆ ಶರಣಾಗಲು ಬಂದಾಗ ಪೊಲೀಸರಿಗೆ ಸೆರೆ ಸಿಕ್ಕಿ ದ್ದಾನೆ. ಅರಸಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ಹಿಂದೆ ದಾಖಲಾಗಿತ್ತು.