ದಾವಣಗೆರೆ, ಏ. 7 – ಸ್ಥಳೀಯ ನಿರ್ದೇಶಕ ರಾಕೇಶ್ ಸೋಮ್ಲಿ ನಿರ್ದೇಶನದ ‘ಕೆಂಡದ ಸೆರಗು’ ಚಿತ್ರದ ಚಿತ್ರೀಕರಣ ನಗರದ ಬೀರಲಿಂಗೇಶ್ವರ ಕುಸ್ತಿ ಅಖಾಡದಲ್ಲಿ ನಾಳೆ ದಿನಾಂಕ 8 ಮತ್ತು 9 ರಂದು ನಡೆಯಲಿದೆ.
ರಾಜ್ಯದ ನಿಜವಾದ ಕುಸ್ತಿ ಪಟುಗಳ ಮಧ್ಯ ಕುಸ್ತಿಯ ದೃಶ್ಯಗಳ ಸನ್ನಿವೇಶದ ಚಿತ್ರೀಕರಣ ನಡೆಯಲಿದೆ. ಕುಸ್ತಿ ವಿಷಯದಲ್ಲಿ ಸಾಕಷ್ಟು ಸಾಧನೆ ಮಾಡಿರುವ ನಮ್ಮೂರಿನ ಪ್ರತಿಭೆಗಳ ಜೊತೆ ಚಿತ್ರೀಕರಿಸಬೇಕು ಎನ್ನುವ ಉದ್ದೇಶದಿಂದ ದಾವಣಗೆರೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಚಿತ್ರದ ಕಥೆ ಸಂಪೂರ್ಣ ಕುಸ್ತಿ ಆಧಾರಿತವಾಗಿದ್ದು, ಕುಸ್ತಿಯೇ ಈ ಸಿನಿಮಾದ ಬಹು ದೊಡ್ಡ ಆಸ್ತಿ ಎಂದು ನಿರ್ದೇಶಕ ರಾಕೇಶ್ ಸೋಮ್ಲಿ ತಿಳಿಸಿದ್ದಾರೆ.
ಶ್ರೀ ಮುತ್ತು ಟಾಕೀಸ್ ಸಂಸ್ಥೆ ಯಲ್ಲಿ ನಿರ್ಮಾಣವಾಗು ತ್ತಿರುವ ಈ ಸಿನಿಮಾವನ್ನು ನಗರದ ಕೊಟ್ರೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಯಾಹಿ ಭೂಮಿಶೆಟ್ಟಿ, ಮಾಲಾಶ್ರೀ, ಬಾಲುರಾಜುವಾಡಿ, ಯಶ್ ಶೆಟ್ಟಿ, ವರ್ಧನ್, ಶೋಭಿತಾ, ಸಿಂಧೂ ಲೋಕನಾಥ್ ಹಾಗೂ ಹಲವು ಕಲಾವಿ ದರು ತಾರಾಗಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.