ನಗರಕ್ಕೆ ಇಂದು ಜಿಲ್ಲಾ ಲಯನ್ಸ್ ರಾಜ್ಯಪಾಲ ಡಾ. ಎಂ.ಕೆ. ಭಟ್

ನಗರಕ್ಕೆ ಇಂದು ಜಿಲ್ಲಾ ಲಯನ್ಸ್ ರಾಜ್ಯಪಾಲ ಡಾ. ಎಂ.ಕೆ. ಭಟ್ - Janathavaniಜಿಲ್ಲೆ ಲಯನ್ಸ್ 317-ಸಿ ರಾಜ್ಯಪಾಲ ಡಾ. ಎಂ.ಕೆ. ಭಟ್ ಅವರು ಇಂದು ನಗರಕ್ಕೆ ಆಗಮಿಸಲಿದ್ದು, ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಇಂದು ಇಡೀ ದಿನ ಏರ್ಪಾಡಾಗಿರುವ ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.

ಬೆಿಳಿಗ್ಗೆ 10 ಗಂಟೆಗೆ ನಗರಕ್ಕಾಗಮಿಸುವ ಡಾ. ಭಟ್ ಅವರನ್ನು ಬಾಪೂಜಿ ಅತಿಥಿ ಗೃಹದಲ್ಲಿ ಸ್ವಾಗತಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ನಡೆಯಲಿರುವ ದಾವಣಗೆರೆ ಲಯನ್ಸ್ ಕ್ಲಬ್ಬಿನ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಭಾಗವಹಿಸುವರು.

ಸಂಜೆ 6.30ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿರುವ ದಾವಣಗೆರೆ ಲಯನ್ಸ್ ಕ್ಲಬ್ಬಿನ ಸಭಾ ಕಾರ್ಯಕ್ರಮಕ್ಕೆ ರಾಜ್ಯಪಾಲ ಡಾ. ಎಂ.ಕೆ. ಭಟ್ ಅವರು ಅಧಿಕೃತ ಭೇಟಿ ನೀಡುವರು ಎಂದು ಕ್ಲಬ್ಬಿನ ಕಾರ್ಯದರ್ಶಿ ಕಣವಿ ನಟರಾಜ್, ಖಜಾಂಚಿ ಎಸ್.ಕೆ. ಮಲ್ಲಿಕಾರ್ಜುನ್, ಸಹ ಕಾರ್ಯದರ್ಶಿ ಭೀಮಾನಂದ ಶೆಟ್ಟಿ ತಿಳಿಸಿದ್ದಾರೆ.

ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್ ಅವರ ಅಧ್ಯಕ್ಷತೆಯಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಪುಷ್ಪಲತಾ ಬಾವಿಮಠ್ ಅವರನ್ನು ಸನ್ಮಾನಿಸಲಾಗುತ್ತ ದೆ. ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್.ನಾಗಪ್ರಕಾಶ್, ಲಯನ್ಸ್ ವಲಯಾಧ್ಯಕ್ಷ ಎಸ್. ಓಂಕಾರಪ್ಪ ಅವರುಗಳು ಮುಖ್ಯ ಅತಿಥಿಗಳಾಗಿದ್ದಾರೆ.

error: Content is protected !!