ಜಗಳೂರು, ಏ. 7 – ಚುನಾವಣೆ ನೀತಿ ಸಂಹಿತೆಯನ್ವಯ ಬ್ಯಾಂಕ್ ಮೂಲಕವೇ ಹಣಕಾಸು ವ್ಯವಹಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿ ಎಸ್. ರವಿ ತಿಳಿಸಿದರು. ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಪ್ರಿಂಟಿಂಗ್ ಪ್ರೆಸ್, ಪೆಟ್ರೋಲ್ ಬಂಕ್, ಶಾಮಿಯಾನ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಿಂಟಿಂಗ್, ಪೆಟ್ರೋಲ್ ಡೀಸೆಲ್, ಶಾಮಿಯಾನ ವ್ಯವಹಾರ ನಡೆಸುವಾಗ ಕಡ್ಡಾಯವಾಗಿ ಚುನಾವಣೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು.
ಅಲ್ಲದೆ ಸಹಕಾರಿ ಬ್ಯಾಂಕ್ ಗಳಿಂದ ನೆಫ್ಟ್ ಮೂಲಕ ಹಣ ಪಾವತಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪ್ರಿಂಟಿಂಗ್ ಪ್ರೆಸ್ ನಲ್ಲಿ ಮುದ್ರಿಸುವ ಕರಪತ್ರಗಳಲ್ಲಿ ಪಬ್ಲಿಷಿಂಗ್ ಹಾಗೂ ತಮ್ಮ ಪ್ರೆಸ್ ನ ಹೆಸರು ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ತಾ.ಪಂ ಇಓ ಚಂದ್ರಶೇಖರ್, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್, ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ನಾಗರಾಜ್, ಅರುಣಕುಮಾರ್, ಪೆಟ್ರೋಲ್ ಬಂಕ್ ಮಾಲೀಕ ಖಲಂದರ್, ಶಾಮಿಯಾನ ಮಾಲೀಕರಾದ ಇಕ್ಬಾಲ್ ಅಹಮದ್ ಮುಂತಾದವರು ಭಾಗವಹಿಸಿದ್ದರು.