ಬೇಸಿಗೆಯ ಹಿನ್ನೆಲೆಯಲ್ಲಿ ಸಾಮಾಜಿಕ ಸೇವಾ ಸಂಸ್ಥೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ದಾನಿಗಳ ನೆರವಿ ನೊಂದಿಗೆ 1 ತಿಂಗಳ ಪರ್ಯಂತ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸುವ ಕಾರ್ಯ ಕ್ರಮವನ್ನು ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಮನಗೌಡ ಕುಸಗೂರ ಅವರು ಇಂದಿನ ಮಜ್ಜಿಗೆಯ ದಾನಿಗಳಾಗಿದ್ದಾರೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ. ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಸತ್ಕಾರ್ಯಗಳಾದ ಮಜ್ಜಿಗೆ, ಗಾಡಿ, ಸೈಕಲ್, ನೀರಿನ ಬಾನಿ ವಿತರಣೆ ಇತ್ಯಾದಿಗಳಿಗೆ ದಾನ ಮಾಡಲಿಚ್ಚಿ ಸುವರು ಎಂ.ಬಿ. ಮಧುಸೂದನ್ (98806 -02121ಅಥವಾ 95380-24444) ಅವರನ್ನು ಸಂಪರ್ಕಿಸಬಹುದು.