ಜ್ಞಾನ ಸದ್ಭಳಕೆಯಾದರೆ ಸುಜ್ಞಾನಿಗಳಾಗುತ್ತಾರೆ

ಜ್ಞಾನ ಸದ್ಭಳಕೆಯಾದರೆ ಸುಜ್ಞಾನಿಗಳಾಗುತ್ತಾರೆ - Janathavaniರಾಣೇಬೆನ್ನೂರು:  ವಿಶ್ವಧರ್ಮ ಪ್ರವಚನದಲ್ಲಿ ನಿಜಗುಣಾನಂದ ಶ್ರೀಗಳು

ರಾಣೇಬೆನ್ನೂರು, ಏ, 3- ಪ್ರತಿಯೊಬ್ಬರಲ್ಲಿಯೂ ಜ್ಞಾನ ವಿದೆ. ಅದನ್ನು ವಿವೇಕ ದಿಂದ ಬಳಕೆ ಮಾಡಿಕೊಂಡರೆ ಸುಜ್ಞಾನಿಗಳಾಗುತ್ತಾರೆ ಎಂದು ರಾಣೇಬೆನ್ನೂರಿನಲ್ಲಿ ನಡೆಯು ತ್ತಿರುವ ವಿಶ್ವಧರ್ಮ ಪ್ರವಚನದಲ್ಲಿ ನಿಜಗುಣಾನಂದ ಶ್ರೀಗಳು ನುಡಿದರು.

ಲಕ್ಷ್ಮಿ ಚಂಚಲೆ. ಅವಳು ಯಾರ ಬಳಿಯೂ ನಿಲ್ಲಲಾರಳು. ಅದಕ್ಕೆ ಅವಳನ್ನು ಹೂವಿನ ಮೇಲೆ ಕುಳ್ಳಿರಿಸಿದ್ದಾರೆ. ಜ್ಞಾನ ಅಂದರೆ ಸರಸ್ವತಿ, ಅವಳನ್ನು ಯಾರೂ ಅಪಹರಿಸಲು ಸಾಧ್ಯವಿಲ್ಲ. ಹೀಗಾಗಿ ಅವಳನ್ನು ಸ್ಥಿರವಾಗಿರಿಸಲಾಗಿದೆ. ಅಪಾರ ಹಣವಿದ್ದು, ಜ್ಞಾನವಿಲ್ಲದಿದ್ದರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಾರದು. ಹಣವಿಲ್ಲದ ಜ್ಞಾನಿಗಳು ಬುದ್ಧಿವಂತಿಕೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳ ಬಹುದು. ಬದುಕಿಗೆ ಹಣವೇ ಪ್ರಧಾನವಲ್ಲ ಎಂದು ಶ್ರೀಗಳು ಹೇಳಿದರು.

ಸತಿ-ಪತಿಗಳೊಂದಾದ ಭಕ್ತಿ ಶಿವನಿಗೆ ಇಷ್ಟ. ಒಂದಾಗದ ಭಕ್ತಿ ಅಮೃತದೊಳು  ವಿಷ ಬೆರೆಸಿದಂತೆ ರಾಮನಾಥ ಎಂದ ಹೇಳಿದ ಬಸವ ಪೂರ್ವದ ದೇವರ ದಾಸಿಮಯ್ಯ ಅವರ ಬದುಕಿನ ಚಿತ್ರಣವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿ, ಆನೆ, ಆಡಂಬರದ ಬದುಕನ್ನು ತಿರಸ್ಕರಿಸಿ, ಸಾಂಗತ್ಯ ಬಯಸಿದ್ದನ್ನು ನಿಜಗುಣಾನಂದ ಶ್ರೀಗಳು ವಿವರಿಸಿದರು. ಸಮಯದ ಮಹತ್ವವನ್ನು ಅರಿತಿದ್ದ ಶರಣರು ಬದುಕಿನಲ್ಲಿ ವೇಳಾಪಟ್ಟಿ ಅಳವಡಿಸಿಕೊಂಡಿದ್ದರು.  

ಪ್ರತಿಯೊಬ್ಬರು ಸಮಯದ ಅರಿವು ಇಟ್ಟುಕೊಳ್ಳಬೇಕು. ಸಮಯ ಹಾಳು ಮಾಡದೆ ಮನದ ಕೇಡು ಕಳೆದುಕೊಂಡು ಮಹಾತ್ಮರ, ಶರಣರ ಬದುಕನ್ನು ಮಾದರಿಯಾಗಿಸಿ ಕೊಳ್ಳುವಂತೆ ನಿಜಗುಣಾನಂದ ಶ್ರೀ ತಿಳುವಳಿಕೆ ನೀಡಿದರು.

error: Content is protected !!