ದಾವಣಗೆರೆ, ಏ. 3- ಜಿಲ್ಲೆಯಲ್ಲಿ ಸೋಮವಾರ 16 ಜನರಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದೆ. ಜಗಳೂರು ತಾಲ್ಲೂಕಿ ನಲ್ಲಿಯೇ ಈ ದಿನ 14 ಜನರಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದೆ. ಕಳೆದ ವಾರ ಜಗಳೂರು ತಾಲ್ಲೂಕಿನಲ್ಲಿ ಐವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರ ಸಂಪರ್ಕಿತರನ್ನು ಪರೀಕ್ಷೆ ಮಾಡಲಾಗಿದ್ದು, ಇಂದು 14 ಜನರಲ್ಲಿ ಸೋಂಕು ಕಾಣಿಸಿದೆ. ಎಲ್ಲರೂ ಹೋಂ ಐಸೋಲೇಷನ್ ನಲ್ಲಿದ್ದಾರೆ. ದಾವಣಗೆರೆಯಲ್ಲಿ 1 ಹಾಗೂ ಹೊರ ಜಿಲ್ಲೆಯ ಒಬ್ಬ ರಲ್ಲೂ ಸೋಂಕು ದೃಢಪಟ್ಟಿದೆ.
January 11, 2025