ಹರಪನಹಳ್ಳಿ, ಏ. 3- ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಚಿಗಟೇರಿ ಶಿವನಾರದ ಮುನಿ ರಥೋತ್ಸವವು ಇದೇ ದಿನಾಂಕ 11ರ ಮಂಗಳವಾರ ಸಂಜೆ 5.30 ಕ್ಕೆ ಮೂಲಾ ನಕ್ಷತ್ರದ ಸಮಯದಲ್ಲಿ ವೈಭವದಿಂದ ನಡೆಯಲಿದೆ. ಮರುದಿನ ಬುಧವಾರ ಸಂಜೆ 5-00ಕ್ಕೆ ಓಕುಳಿ ನೆರವೇರಲಿದೆ ಎಂದು ಶ್ರೀ ನಾರದಮುನಿ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯ ಕ್ಷರೂ ಆದ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ತಿಳಿಸಿದ್ದಾರೆ.
ಸಮುದಾಯ ಭವನದಲ್ಲಿ ನಿನ್ನೆ ನಡೆದ ಸಭೆಯಲ್ಲಿ ರಥೋತ್ಸವದ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು. ಟ್ರಸ್ಟ್ನ ಸದಸ್ಯರುಗಳಾದ ಶಾಮನೂರು ಬಸಣ್ಣ, ಕಲಪನ ಹಳ್ಳಿ ಬಸವಲಿಂಗಪ್ಪ, ಪಲ್ಲಾಗಟ್ಟಿ ನಾಗರಾಜ್, ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ, ಇಂಜಿನಿಯರ್ ಜಿ.ಬಿ.ಸುರೇಶಕುಮಾರ್ ಭಾಗವಹಿಸಿದ್ದರು. ಹರಪನಹಳ್ಳಿ ತಾಲ್ಲೂಕು ತಹಶೀಲ್ದಾರ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪಿ.ಡಿ.ಓ., ಚಿಗಟೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದ್ಯಸರು ಹಾಗೂ ಚಿಗಟೇರಿ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.