ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೃತ್ತಿ ರಂಗಭೂಮಿ – ರಂಗಾಯಣದಿಂದ ಇಂದು ಸಂಜೆ 6:30ಕ್ಕೆ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ‘ಸಕ್ಕರೆ ತಿಂದ ಶಾಣ್ಯಾ’ ನಾಟಕ ಪ್ರದರ್ಶನಗೊಳ್ಳಲಿದೆ. ಮರಾಠಿಯಲ್ಲಿ ಲೇಖಕ ವಿದ್ಯಾಸಾಗರ ಅಧ್ಯಾಪಕರವರಿಂದ ರಚಿತವಾದ ನಾಟಕ ಇದಾಗಿದ್ದು, ಈಗಾಗಲೇ ಸಾವಿರಾರು ಪ್ರದರ್ಶನ ಕಂಡಿದೆ. ದೈನಂದಿನ ಬದುಕಿನಲ್ಲಿ ಜನ ಸಾಮಾನ್ಯರು ಎದುರಿಸುವ ಮಧುಮೇಹದ ಸುತ್ತ ಹೆಣೆಯಲ್ಪಟ್ಟಿರುವ ಕಥಾ ಹಂದರದ ನಾಟಕೀಯ ಅಂಶಗಳು ಇಲ್ಲಿ ಕಾಣಸಿಗುತ್ತವೆ. ರಸವಂತಿ ಕೂಲ್ ಡ್ರಿಂಕ್ಸ್, ವೃತ್ತಿ ರಂಗಭೂಮಿ ರಂಗಾಯಣ ಕಚೇರಿಯಲ್ಲಿ ಟಿಕೆಟ್ ದೊರೆಯುತ್ತವೆ.
February 24, 2025