ದಾವಣಗೆರೆ, ಮಾ.27- ಹರಿಹರ ತಾಲ್ಲೂಕು ಗಂಗನರಸಿ ಗ್ರಾಮದಲ್ಲಿ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ ಹಾಗೂ ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಸಮುದಾಯ ಭವನದ ಕೆಳಮಹಡಿಯ ಊಟದ ಹಾಲ್ ಉದ್ಘಾಟನೆ ಹಾಗೂ ಸರ್ವ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಬರುವ ಏಪ್ರಿಲ್ 23 ರ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಗೌಡ್ರು ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹಳೇ ಬೆಳವನೂರಿನ ಹಾಲೇಶಪ್ಪ ಮತ್ತು ಸಂಗಡಿಗರಿಂದ ಜಾನಪದ, ಭಕ್ತಿಗೀತೆ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತರು ಏಪ್ರಿಲ್ 18 ರೊಳಗಾಗಿ ಗಂಗನರಸಿ ದೇವಸ್ಥಾನದ ವ್ಯವಸ್ಥಾಪಕರ ಬಳಿ ಹೆಸರು ನೋಂದಾಯಿಸಬಹುದು.
ವಿವರಕ್ಕೆ ಗೌಡ್ರ ಚನ್ನಬಸಪ್ಪ (98445-00106), ಬಿ.ಎಂ. ನಾಗೇಂದ್ರಪ್ಪ (97313-35528), ಮಾಗಿ ನಾಗಪ್ಪ ಹರಿಹರ (96327-03376), ಕೆ. ನಿಂಗಪ್ಪ ವಕೀಲರು ಗುತ್ತೂರು ( 98444-33529), ಹೆಚ್. ಬಸವರಾಜಪ್ಪ ಸುಲ್ತಾನಪ್ಪರ ಕಕ್ಕರಗೊಳ್ಳ (96860-68391), ಕೆ.ಬಿ. ರಾಜಶೇಖರ್ (96322-59188) ಅವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಬಿ.ಎಂ. ನಾಗೇಂದ್ರಪ್ಪ, ಎಲ್.ಡಿ. ಗೋಣೆಪ್ಪ, ಹೆಚ್.ಬಿ. ಗೋಣೆಪ್ಪ, ಕೆ.ಬಿ. ರಾಜಶೇಖರ್, ಸುಲ್ತಾನಪ್ಪರ ಬಸವರಾಜಪ್ಪ ಕಕ್ಕರಗೊಳ್ಳ, ದೀಟೂರು ನಾಗರಾಜ್, ಹೆಚ್. ಜಯಣ್ಣ, ಕುಣೆಬೆಳಕೆರೆ ರುದ್ರಪ್ಪ ಉಪಸ್ಥಿತರಿದ್ದರು.