ನಗರದಲ್ಲಿ ಇಂದು `ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ’

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ `ಸಾವಯವ ಸಿರಿ’ ಯೋಜನೆಯಡಿ ಜಿಲ್ಲೆಯ ರೈತರನ್ನು ಸಾವಯವ ಕೃಷಿಯ ಕಡೆಗೆ ಸೆಳೆಯುವ ಉದ್ದೇಶದಿಂದ ದ್ವಿತೀಯ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಕೃಷಿ ಇಲಾಖೆ ಸಹ ಯೋಗದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತ ಮಹಿಳೆಯರು ಮತ್ತು ಯುವ ರೈತರು ತಮ್ಮ ಹೆಸರು ನೋಂದಾಯಿಸಲು ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ (9591426179, 08192-263462) ವನ್ನು ಸಂಪರ್ಕಿಸಿ.

ಸಾವಯವ ಉತ್ಪನ್ನಗಳ ಮಾರುಕಟ್ಟೆಗೆ ಹೆಚ್ಚಿನ ಒತ್ತು  ನೀಡಲಾಗಿದ್ದು, ಕ್ಷೇತ್ರ ಭೇಟಿಯನ್ನು ಸಹ ಏರ್ಪಡಿಸಲಾಗಿದೆ. 

error: Content is protected !!