ಪ್ರತಿಯೊಬ್ಬರಿಗೂ ಪರಿಪೂರ್ಣ ಧರ್ಮ ಅರಿತ ಗುರು ಇರಬೇಕು : ತೋಂಟದಾರ್ಯ ಶ್ರೀಗಳು

ಪ್ರತಿಯೊಬ್ಬರಿಗೂ ಪರಿಪೂರ್ಣ ಧರ್ಮ ಅರಿತ ಗುರು ಇರಬೇಕು : ತೋಂಟದಾರ್ಯ ಶ್ರೀಗಳು - Janathavaniರಾಣೇಬೆನ್ನೂರು, ಮಾ. 27- ಪ್ರತಿಯೊ ಬ್ಬರ ಬದುಕಿನಲ್ಲಿ ಒಬ್ಬ ಗುರುವಿರಬೇಕು. ಅವನು ಹನ್ನೊಂದು ಸಿದ್ಧಾಂತಗಳನ್ನು ಹೊಂದಿ ಪರಿಪೂರ್ಣ ಧರ್ಮ ಅರಿತವನಾಗಿರಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಪ್ರಭು ಸ್ವಾಮೀಜಿ ನುಡಿದರು. ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ವಿಶ್ವಧರ್ಮ ಪ್ರವಚನ ನಡೆಸುತ್ತಿದ್ದರು.

ಶಿವಯೋಗ, ಸಾಧನೆ, ಷಟ್‌ಸ್ಥಲ, ದರ್ಶನ, ಶಿವಾಚಾರ, ಭೃತ್ಯಾಚಾರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಮುಂತಾದ ಶೂನ್ಯ ಸಿದ್ಧಾಂತಗಳನ್ನು ಹೊಂದಿರುವವ ಗುರುವಾಗಿರುತ್ತಾನೆ. ವಚನಗಳೇ ಅವನ ಗ್ರಂಥಗಳು, ಶರಣ ಪರಂಪರೆಯೇ ಅವನ ಸಂಸ್ಕೃತಿಯಾಗಿರ ಬೇಕು. ಕೇವಲ ಕಾವಿ ತೊಟ್ಟವ ಗುರು, ಸನ್ಯಾಸಿ ಆಗಲಾರ ಎಂದು ಶ್ರೀಗಳು ಪ್ರತಿಪಾದಿಸಿದರು.

ಲಿಂಗ ಜಾತಿಯ ಕುರುಹು ಅಲ್ಲ. ಧರ್ಮ ಜಾತಿಗೆ ಮೀಸಲಾದರೆ ಧರ್ಮದ ಉದ್ದೇಶ, ತತ್ವ ಸಿದ್ಧಾಂತಗಳು ಸರ್ವನಾಶವಾಗಲಿವೆ. ಪಂಡಿತರು, ಜ್ಞಾನಿಗಳಿಗಿಂತ ತಾವು ಉಂಡು ಇತರರಿಗೂ ಉಣಬಡಿಸುವ ಅನುಭಾವಿಗಳ ಸಹವಾಸ ಅದ್ಭುತವಾದದ್ದು. ಬದುಕನ್ನು ಅರಿತು ಬದುಕುವ ಮಾರ್ಗದರ್ಶನ ಅವರಿಂದ ಸಿಗಲಿದೆ ಎಂದು ನಿಜಗುಣಾನಂದ ಶ್ರೀಗಳು ಬೋಧಿಸಿದರು. 

ಸ್ಥಳೀಯ ವಿರಕ್ತ ಮಠದ ಗುರುಬಸವ ಶ್ರೀಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!