ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಆರ್.ಜಿ.ಎಸ್. ನಿರ್ದೇಶಕ

ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಆರ್.ಜಿ.ಎಸ್. ನಿರ್ದೇಶಕ - Janathavaniದಾವಣಗೆರೆ,ಮಾ.27- ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ನೂತನ ನಿರ್ದೇಶಕರಾಗಿ ಶ್ರೀ ಕನ್ಯಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ  ಆಯ್ಕೆಯಾಗಿದ್ದಾರೆ.

ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಒಕ್ಕೂಟದ ಸಭಾಂಗಣದಲ್ಲಿ ನಿನ್ನೆ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಸರ್ವಾನುಮತದಿಂದ ನಡೆಯಿತು.

ಒಕ್ಕೂಟದಲ್ಲಿ ತೆರವಾಗಿದ್ದ ಬಿ ವರ್ಗದ ಖಾಲಿ ಉಳಿದಿದ್ದ ಸ್ಥಾನಕ್ಕೆ ಆರ್‌ಜಿಎಸ್ ಅವರ ಹೆಸರನ್ನು ಹಿರಿಯ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಸೂಚಿಸಿದರು. ಉಪಾಧ್ಯಕ್ಷ ಟಿ.ರಾಜಣ್ಣ ಅನುಮೋದಿಸಿದರು.

error: Content is protected !!