ಮಲೇಬೆನ್ನೂರು, ಮಾ.26- ಜಿಗಳಿ ಗ್ರಾಮದ ಶ್ರೀ ಉಡಸಲಾಂಭಿಕ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು 1.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು, ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಅವರು, ದೇವಸ್ಥಾನ ಸಮಿತಿಗೆ ಡಿಡಿ ವಿತರಿಸಿದರು.
ಈ ವೇಳೆ ಮಾತನಾಡಿದ ವಿಜಯಕುಮಾರ್ ನಾಗನಾಳ ಅವರು, ರಾಜ್ಯದಲ್ಲಿ ಇದುವರೆಗೆ 12,400 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಡಾ. ವೀರೇಂದ್ರ ಹೆಗ್ಗಡೆ ಅವರು ಸುಮಾರು 140 ಕೋಟಿ ರೂ. ನೆರವು ನೀಡಿದ್ದಾರೆ.
ಕಳೆದ ಮಾರ್ಚ್ನಿಂದ ಈ ಮಾರ್ಚ್ವರೆಗೆ 1400 ದೇವಸ್ಥಾನಗಳಿಗೆ ಸುಮಾರು 40 ಕೋಟಿ ರೂ. ಹಣವನ್ನು ಧರ್ಮಸ್ಥಳದ ಮಂಜುನಾಥನ ಪ್ರಸಾದದ ರೂಪದಲ್ಲಿ ಸಹಾಯ ಮಾಡಿದ್ದಾರೆ. ದೇವಸ್ಥಾನಗಳ ಅಭಿವೃದ್ಧಿಗೆ 25 ಸಾವಿರ ರೂ.ನಿಂದ ಸುಮಾರು 25 ಲಕ್ಷ ರೂ.ವರೆಗೂ ಹಣವನ್ನು ನೀಡಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಗ್ರಾಮದ ಮುಖಂಡರಾದ ಗೌಡ್ರ ಬಸವರಾಜಪ್ಪ, ಜಿ.ಎಂ.ಆನಂದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಎಂ.ದೇವೇಂದ್ರಪ್ಪ, ಎಂ.ವಿ.ನಾಗರಾಜ, ಮುಖಂಡರಾದ ಬಿಳಸನೂರು ಚಂದ್ರಪ್ಪ, ನಾಗಸನಹಳ್ಳಿ ಮಹೇಶ್ವರಪ್ಪ, ಬಿ.ಸೋಮಶೇಖರಚಾರಿ, ಬಿ.ಬಾಲಪ್ಪ, ಜೆ.ಕೃಷ್ಣಮೂರ್ತಿ, ಕೆ.ಷಣ್ಮುಖಪ್ಪ, ಕೆ.ಎಸ್.ನಂದ್ಯಪ್ಪ, ಭೋವಿ ಮಂಜಣ್ಣ, ಪತ್ರಕರ್ತ ಪ್ರಕಾಶ್, ವಿಜಯ ಭಾಸ್ಕರ್, ಹಾಲಿವಾಣದ ಚಂದ್ರಪ್ಪ, ಜಿ.ಆರ್.ಹನುಮಂತಪ್ಪ ಕಮದೋಡು ಬಸವ ರಾಜಪ್ಪ, ನಿಂಗಪ್ಪ, ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಜಿಗಳಿ ವಲಯ ಮೇಲ್ವೆಚಾರಕಿ ಶ್ರೀಮತಿ ಪದ್ಮಾವತಿ, ಸೇವಾ ಪ್ರತಿನಿಧಿಗಳಾದ ಮಮತಾ ನಾಗರತ್ನ, ಒಕ್ಕೂಟದ ಅಧ್ಯಕ್ಷ ನಾಗರಸನಹಳ್ಳಿ ಬಸವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.