ಪ್ರಧಾನಿ ಅಹಂಕಾರಿ, ಹೇಡಿ

ಪ್ರಧಾನಿ ಅಹಂಕಾರಿ, ಹೇಡಿ - Janathavaniಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ

ನವದೆಹಲಿ, ಮಾ. 25 – ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಡಿ, ಅಹಂಕಾರಿ. ಅವರು ಅಧಿಕಾರದ ಹಿಂದೆ ಬಚ್ಚಿಟ್ಟುಕೊಂಡಿದ್ದಾರೆ. ಈ ದೇಶ ಅಹಂಕಾರಿ ‘ರಾಜ’ನನ್ನು ಗುರುತಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆಯ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ಸಂಕಲ್ಪ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದ ಪ್ರಧಾನ ಮಂತ್ರಿ ಹೇಡಿ ಎಂಬುದು ಸತ್ಯ. ಇದನ್ನು ಹೇಳಿದ್ದಕ್ಕಾಗಿ ನನ್ನನ್ನೂ ಜೈಲಿ ಗೆ ಹಾಕಲಿ ಎಂದು ಸವಾಲು ಹಾಕಿದರು.

ಅಹಂಕಾರಿ ರಾಜನಿಗೆ ಉತ್ತರಿಸು ವುದು ಈ ದೇಶದ ಪರಂಪರೆಯಾಗಿದೆ, ಹಿಂದೂ ಧರ್ಮದ ಪರಂಪರೆ ಆಗಿದೆ. ಇಂತಹ ರಾಜನಿಗೆ ದೇಶದ ಜನ ಉತ್ತರಿಸಲಿದ್ದಾರೆ. ಈ ದಿನದಿಂದ ಎಲ್ಲವೂ ಬದಲಾಗಲಿದೆ ಎಂದವರು ಹೇಳಿದರು.

ರಾಹುಲ್ ಗಾಂಧಿ ವಿರುದ್ಧದ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ದೂರು ನೀಡಿದ ವ್ಯಕ್ತಿಯೇ ನ್ಯಾಯಾಲಯ ದಲ್ಲಿ ವರ್ಷದ ಹಿಂದೆ ಕೇಳಿದ್ದರು. ಆದರೆ, ಈಗ ತಿಂಗಳ ಹಿಂದೆ ಹಠಾತ್ತನೆ ವಿಚಾರಣೆಗೆ ಸಿದ್ಧವಿರುವುದಾಗಿ ಹೇಳಿದರು. ಈಗ ಒಂದು ತಿಂಗಳಲ್ಲೇ ತೀರ್ಪು ಬಂದಿದೆ ಎಂದವರು ಹೇಳಿದರು.

ರಾಹುಲ್ ಗಾಂಧಿ ಕಳೆದ ತಿಂಗಳಿನಿಂದ ಉದ್ಯಮಿ ಗೌತಮ್ ಅದಾನಿ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯವರಿಂದ ಈ ಪ್ರಶ್ನೆಗೆ ಉತ್ತರಿಸಲು ಆಗಲಿಲ್ಲ. ಹೀಗಾಗಿ ಪ್ರಶ್ನೆ ಕೇಳಿದ ವ್ಯಕ್ತಿಯನ್ನೇ ದಮನ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದರು.

ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುತ್ತಾರೆ, ದೇಶ ವೇಗವಾಗಿ ಬೆಳೆಯುತ್ತಿದೆ ಎನ್ನುತ್ತಾರೆ. ಆದರೆ, ಬೆಲೆ ಏರಿಕೆ ಹಾಗೂ ನಿರುದ್ಯೋಗ ಏಕೆ ಹೆಚ್ಚಾಗಿದೆ? ಸಣ್ಣ ವ್ಯಾಪಾರಿಗಳಿಗೆ ಏಕೆ ನೆರವು ಸಿಗುತ್ತಿಲ್ಲ? ಸರ್ಕಾರ ಕೇವಲ ದಮನಿಸಲು ಹಾಗೂ ಅದಾನಿ ಬೆಳೆಸಲು ಮಾತ್ರ ಇದೆಯೇ? ಎಂದವರು ಕೇಳಿದರು.

ತಮ್ಮ ತಂದೆ ರಾಜೀವ್ ಗಾಂಧಿ ಹುತಾತ್ಮರಾಗಿದ್ದರು. ಅಂತಹ ಹುತಾತ್ಮರ ಪತ್ನಿ, ಪುತ್ರರಿಗೆ ಅವಮಾನಿಸಲಾಗುತ್ತಿದೆ. ತಂದೆಯ ಹೆಸರನ್ನು ಮಗ ಮುಂದುವರೆಸುವುದು ಕಾಶ್ಮೀರಿ ಪಂಡಿತರ ಪರಂಪರೆ. ಪ್ರಧಾನ ಮಂತ್ರಿ ಸದನದಲ್ಲಿ ಈ ಬಗ್ಗೆ ಪ್ರಶ್ನಿಸಿ, ತಾಯಿಯ ಮನೆಯ ಹೆಸರನ್ನು ಏಕೆ ಮುಂದುವರೆಸಲಿಲ್ಲ ಎನ್ನುತ್ತಾರೆ. ಕಾಶ್ಮೀರಿ ಪಂಡಿತರನ್ನು ಅವಮಾನ ಮಾಡಿದವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ, ಸಂಸತ್ತಿನಿಂದ ಹೊರ ಹಾಕುವುದಿಲ್ಲ ಎಂದವರು ಕಿಡಿ ಕಾರಿದರು.

error: Content is protected !!