ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಇದೇ ದಿನಾಂಕ 31 ರಂದು ಸಂಜೆ 4.30 ಕ್ಕೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಸ್ವಾಮಿ ಮಹಾರಥೋತ್ಸವ ಜರುಗಲಿದೆ. ಇಂದು ಬೆಳಿಗ್ಗೆ 9.30 ಕ್ಕೆ ಉಚ್ಚಯ್ಯದ ಗಾಲಿಯನ್ನು ಹೊರಕ್ಕೆ ಹಾಕುವುದು. ನಾಡಿದ್ದು ಬುಧವಾರ ರಾತ್ರಿ 7.30 ಕ್ಕೆ ಕಂಕಣಧಾರಣೆ ಮಾಡಲಾಗುವುದು. 31 ರಂದು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಉಚ್ಚಯ್ಯ ಜರುಗಲಿದೆ.
ಸಂಜೆ 4.30 ಕ್ಕೆ ಸಂಗಮೇಶ್ವರ ಸ್ವಾಮಿಯ ಮಹಾರಥೋತ್ಸವ, ರಾತ್ರಿ 8 ಕ್ಕೆ ಬೆಂಗಳೂರಿನ ಮೆಲೋಡಿ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ಶ್ರೀ ವಿನಾಯಕ ಸ್ನೇಹ ಬಳಗದ ವತಿಯಿಂದ ಏರ್ಪಡಿಸಲಾಗಿದೆ.
ಏಪ್ರಿಲ್ 1 ರಂದು ಶನಿವಾರ ಬೆಳಿಗ್ಗೆ 8.30 ಮತ್ತು ಸಂಜೆ 4 ಗಂಟೆಗೆ ಬಯಲು ಜಂಗೀ ಕುಸ್ತಿ, ರಾತ್ರಿ 7.30 ಕ್ಕೆ ಸ್ವಾಮಿ ಪಲ್ಲಕ್ಕಿ ಉತ್ಸವದೊಂದಿಗೆ ಓಕಳಿ ಕಾರ್ಯಕ್ರಮ ನಡೆಯಲಿದೆ.