ಇಂದಿನಿಂದ ಜಾತ್ರೆ ಆರಂಭ : ಏ. 4, 5ಕ್ಕೆ ಅಮ್ಮನ ಹಬ್ಬ
ಮಲೇಬೆನ್ನೂರು, ಮಾ. 26 – ಸುಕ್ಷೇತ್ರ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಇದೇ ದಿನಾಂಕ 30ರ ಗುರುವಾರ ಜರುಗಲಿದ್ದು, ಗ್ರಾಮ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವವನ್ನು ಏಪ್ರಿಲ್ 4 ಮತ್ತು 5ರಂದು ಹಮ್ಮಿಕೊಳ್ಳಲಾಗಿದೆ.
ತೇರಿನ ಕಾರ್ಯಕ್ರಮಗಳು : ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಅಂಗ ವಾಗಿ ನಾಳೆ ಸೋಮವಾರ ರಾತ್ರಿ 10.30ಕ್ಕೆ ದೇವರಿಗೆ ಕಂಕಣಧಾರಣೆ ಮಾಡಲಾಗು ವುದು. ದಿನಾಂಕ 29ರ ಬುಧವಾರ ಬೆಳಿಗ್ಗೆ ಮತ್ತು ಸಂಜೆ ಶ್ರೀ ಆಂಜನೇಯ ಸ್ವಾಮಿಯ ಅಶ್ವೋತ್ಸವ ಹಾಗು ರಾತ್ರಿ ರಥಕ್ಕೆ ಕಳಸ ಸ್ಥಾಪನೆ, ಬೆಳಗಿನ ಜಾವ ಶ್ರೀ ದೇವರ ಗಜೋತ್ಸವ ನಡೆಯಲಿದೆ.
ದಿನಾಂಕ 30ರ ಗುರುವಾರ ಬೆಳಿಗ್ಗೆ 10.45 ಕ್ಕೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 12.30ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಜರುಗಲಿದ್ದು, ನಂತರ ಭಕ್ತಾದಿಗಳಿಂದ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯ ಲಿವೆ. ಇದೇ ದಿನ ತಡರಾತ್ರಿ (ಶುಕ್ರವಾರ ಬೆಳಗಿನ ಜಾವ) ಮಹಾರಥೋತ್ಸವವು ಜರುಗಲಿದೆ. ದಿನಾಂಕ 31ರ ಶುಕ್ರವಾರ ಬೆಳಿಗ್ಗೆ ಶ್ರೀ ಸ್ವಾಮಿಯ ಸೇವೆ, ಮಧ್ಯಾಹ್ನ ಶ್ರೀ ಸ್ವಾಮಿಯ ಭೇಟೆ ಆಡಲು ಹೋಗುವುದು. ಸಂಜೆ ಓಕುಳಿ, ರಾತ್ರಿ ಡೊಳ್ಳು ಮೇಳ ಹಾಗೂ ತೈಲಾದಿಗಳಿಂದ ಧೂಪ ಹಾಕುವುದು.
ಏಪ್ರಿಲ್ 1ರ ಶನಿವಾರ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ ಶ್ರೀ ದುರ್ಗಾಂಬ, ಶ್ರೀ ಮಾತಂಗ್ಯಮ್ಮ ದೇವಿ ಜಿ.ಟಿ. ಕಟ್ಟಿ ಹಾಗೂ ಕೊಮಾರನಹಳ್ಳಿಯ ಶ್ರೀ ಬೀರ ದೇವರುಗಳೊಂದಿಗೆ ಗ್ರಾಮದ ಎಲ್ಲಾ ಮನೆಗಳಿಗೆ ಸಂದರ್ಶನ ನೀಡುವವು. ಸಂಜೆ ಭೂತ ಸೇವೆ ನೆರವೇರಲಿದೆ.
ಅಮ್ಮನ ಹಬ್ಬ : ಏಪ್ರಿಲ್ 4ರ ಮಂಗಳ ವಾರ ರಾತ್ರಿ 11 ಗಂಟೆಯಿಂದ ದೇವಿ ಮೆರ ವಣಿಗೆ ನಡೆಯಲಿದ್ದು, ಏಪ್ರಿಲ್ 5ರ ಬು ಧವಾರ ಬೆಳಗಿನ ಜಾವ ಹಿಟ್ಟಿನ ಕೋಣನ ಬಲಿ ಮತ್ತು ಚರಗ, ಭಕ್ತಾದಿಗಳಿಂದ ಸೇವೆಯ ನಂತರ ಹಾಸ್ಯಗಾರರಿಂದ ಕಾರ್ಯಕ್ರಮಗಳು ಜರುಗುವವು. ಏಪ್ರಿಲ್ 6 ಮತ್ತು 7 ರಂದು ಭಕ್ತಾದಿಗಳಿಂದ ಸೇವೆ ಮತ್ತು ಸಂಜೆ, ಹಾಸ್ಯಗಾರರಿಂದ ಮನೋ ರಂಜನೆ ಕಾರ್ಯಕ್ರಮಗಳು ನಡೆಯಲಿವೆ. ಶುಕ್ರವಾರ ಮಂಗಳ ವಾದ್ಯಗಳೊಂದಿಗೆ ಅಮ್ಮನ ಹಬ್ಬಕ್ಕೆ ತೆರೆ ಬೀಳಲಿದೆ.