ಕೋದಂಡರಾಮ ದೇವಸ್ಥಾನದಲ್ಲಿ ರಾಮ ಜನ್ಮೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಇಂದಿನಿಂದ ಇದೇ ದಿನಾಂಕ 30ರ ಗುರುವಾರದವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಶ್ರೀರಾಮ ಪಾರಾಯಣ, ಪುರಾಣ ಪ್ರವಚನ, ಮೃತ್ಯುಂಜಯ ಜಪ, ನವಗ್ರಹ ಜಪ, ಸೂರ್ಯ ನಮಸ್ಕಾರ ಹಾಗೂ ಪ್ರತಿದಿನ ಸಂಜೆ 6.30 ರಿಂದ 9.30ರವರೆಗೆ ಹರಿಕಥಾ ಶ್ರವಣ, ಮಂತ್ರ ಪುಷ್ಪ ರಾಜಾಶೀರ್ವಾದ ಪೂರ್ವಕ ಮಹಾ ಮಂಗಳಾರತಿ ಪೂಜೆಗಳು ನಡೆಯಲಿವೆ.