ದಾವಣಗೆರೆ, ಮಾ. 24- ಇಡೀ ವಿಶ್ವವೇ ಭಾರತವನ್ನು ನೋಡುವಂತೆ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿ ಸುತ್ತಿರುವುದು ನಮ್ಮ ಪುಣ್ಯ ಎಂದು ಶೋಷಿತರ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದ ರಾಜ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ 8 ವರ್ಷಗಳಲ್ಲಿ ಭಾರತ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಭ್ರಷ್ಟಾಚಾರವಿಲ್ಲದೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಾ ಇತಿಹಾಸ ನಿರ್ಮಿಸಿದ ಹೆಗ್ಗಳಿಕೆ ಪ್ರಧಾನಿ ಮೋದಿಯವರಾಗಿದೆ. ರಾಷ್ಟ್ರಪತಿ ಹುದ್ದೆ ಮತ್ತು ಶೋಷಿತ ಸಮಾದಾಯ ಗಳಿಗೆ ಸಂವಿಧಾ ನಕ ಹಕ್ಕು ಅದೇ ರೀತಿ ಗೊಲ್ಲರ ಹಟ್ಟಿಗಳಿಗೆ, ಲಂಬಾಣಿ ಹಟ್ಟಿಗಳ ಸಮದಾಯದ ವರಿಗೆ ಕಂದಾಯ ಗ್ರಾಮಗಳು ಎಂದು ಹಕ್ಕು ಪತ್ರ ನೀಡುವುದರ ಮೂಲಕ ಹೆಚ್ಚು ಪ್ರಾಧಾನ್ಯತೆಯನ್ನು ಶೋಷಿತ ವರ್ಗಗಳಿಗೆ ಕೊಟ್ಟಿದ್ದಾರೆ. ನಾಳೆ ದಿನಾಂಕ 25 ರಂದು ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಯವರಿಗೆ ಶೋಷಿತರ ವರ್ಗಗಳ ಒಕ್ಕೂಟ ಸ್ವಾಗತಿಸುತ್ತದೆ ಎಂದು ಬಾಡದ ಆನಂದರಾಜ್ ತಿಳಿಸಿದರು. ಸೋಲಿಲ್ಲದ ಸರದಾರದಂತಿರುವ ಸಂಸದ ಜಿಎಂ.ಸಿದ್ದೇಶ್ವರ ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರಧಾನಿಯವರ ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿ ಐತಿಹಾಸಿಕ ಸಮಾವೇಶ ಇತಿಹಾಸ ಸೇರುವಂತಾಗಲಿ ಎಂದು ಆನಂದರಾಜ್ ಆಶಯ ವ್ಯಕ್ತಪಡಿಸಿದ್ದಾರೆ.
January 12, 2025