ದಾವಣಗೆರೆ, ಮಾ. 24- ಚುನಾವಣೆ ಸಂದರ್ಭ ಬಂದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ನೆನಪಾಗುತ್ತದೆ. ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸದ ಮೋದಿ ಕೇವಲ ಓಟಿಗಾಗಿ ದಾವಣಗೆರೆಗೆ ಬರುತ್ತಿದ್ದಾ ರೆಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಕರ್ನಾಟಕ ಸರ್ಕಾರಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಜಿಎಸ್‌ಟಿ ಪರಿಹಾರವನ್ನು ನೀಡದೇ ಮಲತಾಯಿ ಧೋರಣೆ ಅನುಸರಿ ಸಿದ್ದಾರೆ ಎಂದರು. ಕರ್ನಾಟಕದಿಂದ ಕೇಂದ್ರದ ಖಜಾನೆ ತುಂಬಿಸಿಕೊಂಡು ರಾಜ್ಯಕ್ಕೆ ಬರಬೇಕಾದ ಪಾಲನ್ನೂ ಸಹ ಕಳೆದ 9 ವರ್ಷಗಳಿಂದ ಕೊಡದೇ ಜನತೆಗೆ ವಂಚಿಸಿಕೊಂಡು ಬರುತ್ತಿರು ವುದು ರಾಜ್ಯಕ್ಕೆ ಮಾಡಿದ ದ್ರೋಹ ವಾಗಿದೆ ಎಂದು ಕಿಡಿಕಾರಿದರು.
ನ್ಯಾಯಾಂಗ ವ್ಯವಸ್ಥೆಯನ್ನೂ ಸಹ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಂತೆ ಆಡಳಿತ ನೀಡುತ್ತಿದ್ದಾರೆಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎನ್. ಮಂಜು ನಾಥ್, ಮಹಮದ್ ಜಿಕ್ರಿಯಾ, ಸುರೇಶ್ ಜಾಧವ್, ಎನ್.ಎಸ್. ವೀರಭದ್ರಪ್ಪ ಉಪಸ್ಥಿತರಿದ್ದರು.