ಉಕ್ಕಡಗಾತ್ರಿ: ಇಂದು ಹರಿಹರ ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ

ಹರಿಹರ, ಮಾ.23 ಸುಕ್ಷೇತ್ರ ಉಕ್ಕಡಗಾತ್ರಿ   ಶ್ರೀ ಗುರು ಕರಿಬಸವೇಶ್ವರ ಗದ್ದಿಗೆ ಆವರಣದಲ್ಲಿ ನಾಳೆ ದಿನಾಂಕ 24ರ  ಶುಕ್ರವಾರ ಹರಿಹರ ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸಲಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶುಕ್ರವಾರ ಬೆಳಗ್ಗೆ 8-30ಕ್ಕೆ  ರಾಷ್ಟ್ರಧ್ವಜವನ್ನು      ಗ್ರಾ.ಪಂ. ಅಧ್ಯಕ್ಷೆ ಕರಿಬಸಮ್ಮ ಮತ್ತು ಕನ್ನಡ ಧ್ವಜಾರೋಹಣವನ್ನು   ಜಿಲ್ಲಾ ‌ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಡಿ.ಎಂ ಮಂಜುನಾಥಯ್ಯ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಬೆಳಗ್ಗೆ 9ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ತಹಶೀಲ್ದಾರ್ ಪೃಥ್ವಿ ಸಾನಿಕಂ ಉದ್ಘಾಟನೆ ಮಾಡಲಿದ್ದು, ಅತಿಥಿಗಳಾಗಿ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಸಿಪಿಐ ಗೌಡಪ್ಪಗೌಡ ಭಾಗವಹಿಸುವರು.

ಗ್ರಾ ಪಂ ಸದಸ್ಯರಾದ ಜಯಮ್ಮ ರಂಗನಾಥ್, ಭರಮಗೌಡ ಶಿವಪೂಜೆ, ಹೇಮಂತ್ ಸದಿವಣ್ಣ ನವರ್, ಗೀತಾ ಸಂಜೀವಪ್ಪ, ಸಾಕಮ್ಮ ದೇವೇಂ ದ್ರಪ್ಪ, ಶಂಕರಪ್ಪ ಕಮದೋಡು, ಕೆಂಚವೀರಯ್ಯ, ಗೌರಮ್ಮ, ರವಿಗೌಡ, ದಡ್ಡಿ ಪ್ರಕಾಶ್, ಟಿ.ಪಿ. ರಾಮ ಚಂದ್ರಪ್ಪ ಮತ್ತು ಕನ್ನಡಪರ ಹೋರಾಟಗಾರರಾದ ಯಕ್ಕೆಗೊಂದಿ ರುದ್ರಗೌಡ, ಹೆಚ್. ಸುಧಾಕರ್, ರಮೇಶ್ ಮಾನೆ, ಅಬ್ದುಲ್ ರೆಹಮಾನ್, ಗೋವಿಂದ, ರಾಜೇಶ್, ಸಿ. ಜಯಣ್ಣ, ಈಶಪ್ಪ ಬೂದಿಹಾಳ, ಹೆಚ್. ಚಂದ್ರಪ್ಪ, ವಸಂತ ದೇವಾಡಿಗ, ಬಿ. ಎಸ್. ನಿರ್ಮಲ ಮತ್ತಿತರರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯಯೋಧ ಗೋವಿನಹಾಳ್ ದಿ. ದಡ್ಡಿ ನಿಂಗನಗೌಡರ ವೇದಿಕೆ ಯಲ್ಲಿ ಜರುಗುವ  ಉದ್ಘಾಟನಾ ಸಮಾರಂಭದ  ಸಾನ್ನಿಧ್ಯವನ್ನು ನಂದಿಗುಡಿ ವೃಷಭಪುರಿ ಮಹಾಸಂಸ್ಥಾನದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. 

ಶಾಸಕ ಎಸ್. ರಾಮಪ್ಪ ಅಧ್ಯಕ್ಷತೆ ವಹಿಸಲಿದ್ದು,   ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಸಮ್ಮೇಳನವನ್ನು  ಉದ್ಘಾಟಿಸುವರು.  ಕರಿಬಸವೇಶ್ವರ ಸ್ವಾಮಿ ಮಹಾದ್ವಾರದ ಉದ್ಘಾಟನೆಯನ್ನು  ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಚಿತ್ರಕಲಾ ಪ್ರದರ್ಶನವನ್ನು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್  ಉದ್ಘಾಟಿಸುವರು.   ಮಾಜಿ ಶಾಸಕ ಬಿ.ಪಿ. ಹರೀಶ್  ಧ್ವನಿ ಸುರುಳಿ ಬಿಡುಗಡೆ ಮಾಡುವರು.  ಮುಖ್ಯ ಅತಿಥಿಗಳಾಗಿ ಎಂ.ಎಲ್.ಸಿ. ಮೋಹನ್ ಕೊಂಡಜ್ಜಿ,     ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಉಪಾಧ್ಯಕ್ಷ ಜಿ. ನಂದಿಗೌಡ್ರು, ಕಾರ್ಯದರ್ಶಿ ಎಸ್. ಸುರೇಶ್, ತಾಪಂ ಇಓ ಗಂಗಾಧರನ್, ಬಿಇಓ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಗೌರವಾಧ್ಯಕ್ಷ ಎಂ. ಉಮ್ಮಣ್ಣ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ,  ಎ.ಆರ್. ಉಜ್ಜಿನಪ್ಪ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಭಾಗವಹಿಸಲಿದ್ದಾರೆ.

ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಲಲಿತಮ್ಮ ಡಾ ಚಂದ್ರಶೇಖರ್ ಅವರು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರುವ ಬಿ. ಷಣ್ಮುಖಪ್ಪ ಕಮಲಾಪುರ ಇವರಿಗೆ ಕನ್ನಡ ಧ್ವಜ ಹಸ್ತಾಂತರ  ಮಾಡಲಿದ್ದಾರೆ.  

ಮಧ್ಯಾಹ್ನ ಒಂದು ಗಂಟೆಗೆ ಗೋಷ್ಠಿ : `ಹರಿಹರ ತಾಲ್ಲೂಕು ಸಮಕಾಲೀನ ವಾಸ್ತವ ಮತ್ತು ಪ್ರತಿಕ್ರಿಯೆಗಳು’ ಅಧ್ಯಕ್ಷತೆ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ವಿ. ಪಾಟೀಲ್.  ಉಪನ್ಯಾಸ ಒಂದು : ವಿಷಯ – `ಹರಿಹರ ತಾಲ್ಲೂಕಿನ ನಾಗರಿಕ ಅವಶ್ಯಕತೆ ಮತ್ತು ಪರಿಹಾರ’-ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಅವರಿಂದ.

2ನೇ ಗೋಷ್ಠಿ :  ವಿಷಯ   `ಹರಿಹರ ತಾಲ್ಲೂ ಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಅನನ್ಯತೆಗಳು’  3ನೇ ಗೋಷ್ಠಿ:  ವಿಷಯ `ರೈತರ ಸಮಸ್ಯೆಗಳು ಮತ್ತು  ಪರಿಹಾರ’  ಕುಂದೂರು ಮಂಜಪ್ಪ ಹೊಳೆಸಿರಿಗೆರೆ ಅವರು ಮಾತನಾಡಲಿದ್ದಾರೆ.  

ನಂತರ ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಜೆ. ಕಲೀಂ ಬಾಷಾ ವಹಿಸುವರು. ಕವಿ ಬ್ರಹ್ಮದೇವ ಹದಳಗಿ ಆಶಯ ನುಡಿ ಆಡಲಿದ್ದಾರೆ. ಕಸಾಪ ಹೋಬಳಿ ಘಟಕದ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಣ್ಣ ಕೊಂಡಜ್ಜಿ, ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ಪರಮೇಶ್ವರಪ್ಪ ಕತ್ತಿಗೆ, ಶಾಂತಕುಮಾರಿ ಭಾಗವಹಿಸಲಿದ್ದಾರೆ.   

ಸಂಜೆ 4-30ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆ ಕಸಾಪ ಅಧ್ಯಕ್ಷ ಡಿ.ಎಂ‌. ಮಂಜುನಾಥಯ್ಯ, ಸಮಾರೋಪ ಭಾಷಣ ಹಿರಿಯ ಸಾಹಿತಿ ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ. ಸಮ್ಮೇಳನಾಧ್ಯಕ್ಷರ ನುಡಿ ಕಮಲಾಪುರ ಬಿ. ಷಣ್ಮುಖಪ್ಪ, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಎನ್. ಜಿ. ನಾಗನಗೌಡ್ರ ಸಿರಿಗೆರೆ, ಮಲೇಬೆನ್ನೂರು ಬಿ. ಚಿದಾನಂದಪ್ಪ, ವಿಶ್ರಾಂತ ಕುಲಪತಿ ದೀಟೂರು ಮಹೇಶ್ವರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ. ಹಾಲೇಶಪ್ಪ, ಹನಗವಾಡಿ ಜಗದೀಶಪ್ಪ ಬಣಕಾರ್, ಎಂ‌.ನಾಗೇಂದ್ರಪ್ಪ, ಎಸ್.ಎಂ‌. ವೀರೇಶ್ ಹನಗವಾಡಿ, ಶ್ರೀನಿವಾಸ್ ನಂದಿಗಾವಿ,  ಬಿ.ಎಂ. ವಾಗೀಶ್ ಸ್ವಾಮಿ, ಎಂ.ಜಿ. ಪರಮೇಶ್ವರಗೌಡ್ರು, ಜಿ. ಮಂಜುನಾಥ್ ಪಾಟೀಲ್, ಹೆಚ್. ನಿಜಗುಣ,  ಶಾಂಭವಿ ಡಿ.ಜಿ. ನಾಗರಾಜ್, ಸಿ.ಎನ್. ಹುಲುಗೇಶ್, ಬಂಡೇರ ತಿಮ್ಮಣ್ಣ, ಎಸ್.ಕೆ. ಬಸವರಾಜ್, ಬಿ. ದಿಳ್ಳೆಪ್ಪ ಭಾಗವಹಿಸುವರು.  

ಸಂಜೆ 6 ಗಂಟೆಗೆ ಬಹಿರಂಗ ಅಧಿವೇಶನ, ಸಾಂಸ್ಕೃತಿಕ ಹಾಗೂ ಹಾಸ್ಯ ಸಂಭ್ರಮ  ಕಾರ್ಯಕ್ರಮ ಇರುತ್ತದೆ ಎಂದು ಮಂಜುನಾಥಯ್ಯ ತಿಳಿಸಿದರು.  

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಕಸಾಪ ಸದಸ್ಯ ಎ. ರಿಯಾಜ್ ಅಹಮದ್, ತಾ  ಕಸಾಪ‌ ಗೌರವ ಕಾರ್ಯದರ್ಶಿಗಳಾದ ಬಿ.ಬಿ. ರೇವಣನಾಯ್ಕ್, ಎಂ.ಚಿದಾನಂದ ಕಂಚಿಕೇರಿ,   ಕೋಶಾಧ್ಯಕ್ಷ ವಿಜಯ ಮಹಾಂತೇಶ್, ಕಸಾಪ ಮಲೇಬೆನ್ನೂರು ಹೋಬಳಿ ಘಟಕದ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಕಾರ್ಯದರ್ಶಿ ಚಂದ್ರಶೇಖರ್,                  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಭೂಮೇಶ್, ಎಂ. ಉಮ್ಮಣ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

error: Content is protected !!