ಕಟ್ಟಡ ಪರವಾನಗಿ ನಿಯಮಾನುಸಾರ ಪರಿಶೀಲಿಸಿ ಕ್ರಮ

ದಾವಣಗೆರೆ, ಮಾ.23- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2015-16 ಜುಲೈ ಮಾಹೆ ಯಿಂದ ಕಟ್ಟಡ ಪರವಾನಿಗೆ ನೀಡುವ ಸಂದರ್ಭದಲ್ಲಿ ಭದ್ರತಾ ಠೇವಣಿ (Security deposit) ಅನ್ನು ಪಾವತಿಸಿಕೊಳ್ಳುತ್ತಿದ್ದು, ಸದರಿ ಪಾವತಿಯಾಗಿರುವ ಶುಲ್ಕವನ್ನು ಇತರೆ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುವ ಸಂಬಂಧ ಫೆ. 9 ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದೆ. 

ಆದ್ದರಿಂದ ಮಾರ್ಚ್ 31 ಕ್ಕಿಂತ ಹಿಂದೆ ನಿಯಮಾನುಸಾರ ಅನುಮೋದಿತ ಕಟ್ಟಡ ಪರವಾನಿ ಗೆ ನಕ್ಷೆಯಂತೆ ಕಟ್ಟಡ ವನ್ನು ನಿರ್ಮಿಸಿಕೊಂಡಿರಬೇಕು ಹಾಗೂ ಸಕ್ಷಮ ಪ್ರಾಧಿಕಾರದಿಂದ  occupancy certificate ಅನ್ನು ಪಡೆದುಕೊಂಡವರು ಮಾತ್ರ ಭದ್ರತಾ ಠೇವಣಿ ಮೊತ್ತವನ್ನು ಹಿಂಪಡೆಯಲು ಮಾ. 16 ರಿಂದ 30 ದಿನದೊಳಗಾಗಿ ಅಗತ್ಯ
ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿ ಶೀಲಿಸಿ ಕ್ರಮ ಜರುಗಿಸ ಲಾಗುವುದು ಎಂಬುದಾಗಿ ಈ ಮೂಲಕ ತಿಳಿಯ ಪಡಿಸಿದೆ.

error: Content is protected !!