ಹೊನ್ನಾಳಿಗೆ ನಾಳೆ ಮುಖ್ಯಮಂತ್ರಿ

ಹೊನ್ನಾಳಿಗೆ ನಾಳೆ ಮುಖ್ಯಮಂತ್ರಿ - Janathavaniದಾವಣಗೆರೆ, ಮಾ.15- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿದ್ದು ದಿನಾಂಕ 17ರ ಶುಕ್ರವಾರ ಹೊನ್ನಾಳಿ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಾಡಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 2.15ಕ್ಕೆ ಶಿಕಾರಿಪುರದಿಂದ ಹೊರಟು, ಮಧ್ಯಾಹ್ನ 2.30ಕ್ಕೆ ಹೆಚ್.ಕಡದಕಟ್ಟೆ ಹೆಲಿಪ್ಯಾಡ್‍ಗೆ ಆಗಮಿಸುವರು. ನಂತರ ಹೊನ್ನಾಳಿಯ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 4.30ಕ್ಕೆ ಹೆಚ್.ಕಡದಕಟ್ಟೆ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

error: Content is protected !!