ದಾವಣಗೆರೆ ಷುಗರ್ ಕಂಪನಿಯ ಎಂಡಿ ಕಚೇರಿಗೆ ಭೇಟಿ ನೀಡಿಲ್ಲ : ಡಿಸಿ

ದಾವಣಗೆರೆ ಷುಗರ್ ಕಂಪನಿಯ ಎಂಡಿ ಕಚೇರಿಗೆ ಭೇಟಿ ನೀಡಿಲ್ಲ : ಡಿಸಿ - Janathavaniದಾವಣಗೆರೆ,ಮಾ.14- ಕುಕ್ಕುವಾಡದ ದಾವಣ ಗೆರೆ ಷುಗರ್ ಕಂಪನಿ ವಿರುದ್ಧ ನಿನ್ನೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ತಾವು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸ್ಪಷ್ಟಪಡಿಸಿದ್ದಾರೆ.

ಕಾರ್ಖಾನೆಯಿಂದ ಹೊರ ಬರುವ ಬೂದಿ ಮತ್ತು ತ್ಯಾಜ್ಯ ನೀರಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನರು, ಜಾನುವಾರುಗಳಿಗೆ ತೀವ್ರ ತೊಂದರೆಯಾಗುತ್ತದೆ ಎಂಬ ದೂರಿನ ಮೇರೆಗೆ ಕಾರ್ಖಾನೆಯನ್ನು ಪರಿಶೀಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಎಸ್ಪಿ, ತಹಶೀಲ್ದಾರ್, ಪರಿಸರ ಅಧಿಕಾರಿ ಗಳೊಂದಿಗೆ ತಾವು ಕಾರ್ಖಾನೆಯ ಸ್ಥಳ ಪರಿಶೀಲನೆ ನಡೆಸಿದ್ದು, ಕಾರ್ಖಾನೆ ಚಿಮುಣಿ ಮೂಲಕ ಹೊರ ಸೂಸುವ ಬೂದಿ ಮತ್ತು ತ್ಯಾಜ್ಯ ನೀರಿನಿಂದ ಮಾಲಿನ್ಯವಾಗುತ್ತಿರುವುದು ನಿಜ ಎಂಬುದು ಕಂಡು ಬಂದಿದೆ. ಇದನ್ನು ನಿಯಂತ್ರಿಸುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರೈತರಿಗೆ ಭರವಸೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ.ಗಲಾಟೆ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಮಂಗಳವಾರ ಬೃಹತ್ ಬೈಕ್ ರಾಲಿ ಆಯೋಜಿಸಿದ್ದರು.

error: Content is protected !!