ದಾವಣಗೆರೆ, ಮಾ. 14 – ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ಯುವ ಕ್ರೀಡೋತ್ಸವ 2023 ರಾಜ್ಯ ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟವನ್ನು ಇದೇ ದಿನಾಂಕ 18 ಮತ್ತು 19 ರಂದು ಬೆಂಗಳೂರಿನ ವಿದ್ಯಾ ಶಿಲ್ಪ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕ್ರೀಡೋತ್ಸವದಲ್ಲಿ ಗುಂಪು ಕ್ರೀಡೆಗಳಾದ ಕಬಡ್ಡಿ, ಬ್ಯಾಡ್ಮಿಂಟನ್, ಖೋ ಖೋ, ವಾಲಿಬಾಲ್, ಫುಟ್ ಬಾಲ್, ಬಾಸ್ಕೆಟ್ ಬಾಲ್, ಥ್ರೋಬಾಲ್, ಕ್ರಿಕೆಟ್ ಹಾಗೂ ವೈಯಕ್ತಿಕ ಕ್ರೀಡೆಗಳಾದ ಚೆಸ್, 100 ಮೀಟರ್ ಓಟ, 400 ಮೀಟರ್ ಓಟ, 1000ಮೀ ರಿಲೇ ಓಟ ಇರುತ್ತವೆ. ಆಕರ್ಷಕ ನಗದು ಬಹುಮಾನ ರೂ. 5,00,000 ಇವೆ ಎಂದು ವಿಭಾಗದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸಿ : 9844679511.