ಹಾಸ್ಟೆಲ್ ವಾರ್ಡನ್ ಸುಧಾ ಅಮಾನತ್ತು

ದಾವಣಗೆರೆ, ಮಾ.14- ಕಳೆದ ಜನವರಿ 26ರಂದು ಗಣರಾಜ್ಯೋ ತ್ಸವ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ವನ್ನು ಧ್ವಜಸ್ಥಂಭದ ಹತ್ತಿರ ಇಡದೇ ಕರ್ತವ್ಯ ಲೋಪವೆಸಗಿ ರಾಷ್ಟ್ರೀಯ ಹಬ್ಬಕ್ಕೆ ಅಗೌರವ ಉಂಟು ಮಾಡಿದ ಆರೋಪದಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಾರ್ಡನ್ ಕೆ.ಸಿ. ಸುಧಾ ಅಮಾನತ್ತುಗೊಂಡಿ ದ್ದಾರೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿಗಳೂ, ಶಿಸ್ತು ಪ್ರಾಧಿ ಕಾರಿಗಳೂ ಆದ ಡಾ. ಎ.ಚನ್ನಪ್ಪ ಅವರು ಕಳೆದ ಮಾರ್ಚ್ 3ರಂದು ಅಮಾನತ್ತು ಮಾಡಿ ಆದೇಶಿಸಿದ್ದಾರೆ.

error: Content is protected !!