ದಾವಣಗೆರೆ, ಮಾ.8- ನಗರದ ಇಂಪೀರಿಯಲ್ ಪಬ್ಲಿಕ್ ಶಾಲೆಯಲ್ಲಿ ಡಾ.ಸಿ.ವಿ. ರಾಮನ್ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಶಾಲಾ ಮಕ್ಕಳು ವಿವಿಧ ವಿಜ್ಞಾನ ಚಟುವಟಿಕೆ ಆಧಾರಿತ ಪರಿಕಲ್ಪನೆಗಳ ಮಾದರಿಗಳನ್ನು ತಯಾರಿಸಿದ್ದರು. ಪ್ರಾಂಶುಪಾಲ ರೋಷನ್ ಕುಮಾರ್ ವಿಜ್ಞಾನದ ಮಹತ್ವ ವನ್ನು ಮಕ್ಕಳಿಗೆ ತಿಳಿಸಿದರು. ಅಧ್ಯಕ್ಷತೆಯನ್ನು ನಿಶಾ ಸಚಿನ್ ಚಕ್ರವರ್ತಿ ವಹಿಸಿದ್ದರು.
December 24, 2024