ನಾಳೆಯಿಂದ ಬ್ರಹ್ಮಲೀನ ಸದ್ಗುರುಗಳ ಸಂಸ್ಮರಣೆ

ನಾಳೆಯಿಂದ ಬ್ರಹ್ಮಲೀನ ಸದ್ಗುರುಗಳ ಸಂಸ್ಮರಣೆ - Janathavaniಮಲೇಬೆನ್ನೂರು, ಮಾ. 7 – ಯಲವಟ್ಟಿ ಗ್ರಾಮದ ಶ್ರೀ ಗುರುಸಿದ್ಧಾಶ್ರ ಮದಲ್ಲಿ ಇದೇ ದಿನಾಂಕ 9 ರ ಗುರುವಾರ ಮತ್ತು 10 ರ ಶುಕ್ರವಾರ ಬ್ರಹ್ಮಲೀನ ಸದ್ಗುರುಗಳಾದ ಶ್ರೀ ಶಿವಾನಂದ ಸ್ವಾಮೀಜಿ ಹಾಗೂ ಶ್ರೀ ನಿತ್ಯಾನಂದ  ಸ್ವಾಮೀಜಿ ಅವರುಗಳ ಪುಣ್ಯಾರಾಧನೆ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ದಿನಾಂಕ 9 ರ ಗುರುವಾರ ಬ್ರಾಹ್ಮೀ ಮುಹೂರ್ತ ದಲ್ಲಿ ಶ್ರೀ ಗುರು ಕಲಶ ಸ್ಥಾಪನೆ, ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಭಗವದ್ಗೀತಾ, ಸಾಮೂಹಿಕ ಪಾರಾಯಣದ  ನಂತರ ಬೆಳಿಗ್ಗೆ 9 ಗಂಟೆಗೆ ಮಹಾತ್ಮರಿಂದ ಪ್ರಣವ ಧ್ವಜಾರೋಹಣ ನೆರವೇರಿಸಲಾಗುವುದು. ನಂತರ ವೇದಾಂತ ಪ್ರವಚನ ಮತ್ತು ಸಂಜೆ 7 ಕ್ಕೆ ಸತ್ಸಂಗ ಕಾರ್ಯಕ್ರಮ ಇರುತ್ತದೆ. 

ದಿನಾಂಕ 10 ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಉಭಯ ಶ್ರೀಗಳವರ ಪುಣ್ಯಸ್ಮರಣೆ, ವೇದಾಂತ ಪ್ರವಚನ ಮತ್ತು ಮಹಾತ್ಮರ ಪಾದಪೂಜೆ ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳುವುದು.

ಈ ಎರಡೂ ದಿನಗಳ ಕಾರ್ಯಕ್ರ ಮದಲ್ಲಿ ಚಿತ್ರದುರ್ಗ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ದಾವಣಗೆರೆಯ ಜಡೇಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಇಬ್ರಾಹಿಂಪುರದ ಶ್ರೀ ದಯಾನಂದ ಸ್ವಾಮೀಜಿ, ಹದಡಿಯ ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ, ಹೋತನ ಹಳ್ಳಿಯ ಶ್ರೀ ಶಂಕರಾನಂದ ಸ್ವಾಮೀಜಿ, ದಾಗಿನಕಟ್ಟಿ ಮತ್ತು ಬಸವಾ ಪಟ್ಟಣ ಮಠಗಳ ಕೃಷ್ಣಾನಂದ ಭಾರತಿ ಸ್ವಾಮೀಜಿಗಳು, ಮಣಕೂರಿನ ಶ್ರೀ ಚನ್ನಬಸಮ್ಮ ತಾಯಿ ಅವರು ಸಾನಿಧ್ಯ ವಹಿಸಲಿದ್ದಾರೆ.

ಸಂಸದ ಜಿ.ಎಂ. ಸಿದ್ಧೇಶ್ವರ, ಶಾಸಕ ಎಸ್. ರಾಮಪ್ಪ, ಹೆಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ಮೋಹನ್ ಕುಮಾರ್ ಕೊಂಡಜ್ಜಿ, ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.  

error: Content is protected !!