ಮಕ್ಕಳ ಲೋಕದಿಂದ ಸಾಹಿತ್ಯೋತ್ಸವ

ದಾವಣಗೆರೆ, ಮಾ.7- ವಿದ್ಯಾರ್ಥಿ ಗಳಿಗೆ ತಾಯಿ ಬಾಷೆ ಬಂದರೆ ಅವರು  ಎಲ್ಲ  ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುತ್ತಾರೆ ಎಂದು ಶ್ರೀ ಸಿದ್ದಗಂಗಾ ಮಕ್ಕಳ ಲೋಕದ ಸ್ಥಾಪಕ ಹಿರಿಯ ಸಾಹಿತಿ ಕೆ.ಎನ್.ಸ್ವಾಮಿ ಹೇಳಿದರು.

ಬಸವೇಶ್ವರ ಶಾಲೆಯಲ್ಲಿ ನಡೆದ ಮಕ್ಕಳ ಸಾಹಿತ್ಯೋತ್ಸವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಮಕ್ಕಳಿಗೆ ಕಲಿಕೆಯ ಮಹತ್ವವನ್ನು  ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಜಿ.ಉಮೇಶ್  ಮಾತನಾಡಿ, ಕನ್ನಡದ ಮಕ್ಕಳು ಕನ್ನಡದ ಮೂಲಕವೇ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು. ಕನ್ನಡದ  ಬರವ ಣಿಗೆ ಸ್ಪರ್ಧೆಯಲ್ಲಿ ನೂರಾರು ಮಕ್ಕಳು  ಭಾಗ ವಹಿಸಿದ್ದರು. 3ನೇ ತರಗತಿಯ ಚಿನ್ಮಯಿ, 2ನೇ ತರಗತಿಯ ಅಭಿಷೇಕ್, 4ನೇ ತರಗತಿ ಪ್ರಾರ್ಥನಾ ಪ್ರಥಮ ಬಹುಮಾನ ಪಡೆದರು. ಶ್ರೀ ಸಿದ್ದಗಂಗಾ ಮಕ್ಕಳ ಲೋಕದ ಪ್ರಾಚಾರ್ಯ ವಿದುಷಿ ರುದ್ರಾಕ್ಷಿಬಾಯಿ ಚಿನ್ನಸಮುದ್ರ ಅವರು ಮಕ್ಕಳಿಗೆ ಬಹುಮಾನ ವಿತರಿಸಿ ದರು. ಹಿರಿಯ ಕವಿ ಪುಟ್ಟಾನಾಯ್ಕರು ಕಾರ್ಯಕ್ರಮ ಏರ್ಪಡಿಸಿದ್ದರು.

ತೀರ್ಪುಗಾರರಾಗಿ ಪ್ರಸನ್ನ ಕುಮಾರ್, ಸಿದ್ದೇಶ್, ಚಂದ್ರಶೇಖರ್, ಮಹದೇವಪ್ಪ ಹೊಳಲು,ರಾಜಪ್ಪ, ಜ್ಯೋತಿಲಕ್ಷ್ಮಿ, ಛಾಯಾ, ಬಸಮ್ಮ ಬೆಟಗೇರಿ ಆಗಮಿಸಿದ್ದರು.

error: Content is protected !!