ಹೊನ್ನಾಳಿ : ರೈತರಿಂದ ಅರ್ಜಿ ಆಹ್ವಾನ

 ಹೊನ್ನಾಳಿ, ಮಾ.7-  ಕೃಷಿ ಸಂಸ್ಕರಣೆ  ಘಟಕಗಳಾದ ರಾಗಿ ಕ್ಲೀನಿಂಗ್ ಮಷಿನ್, ಸಣ್ಣ ಯಂತ್ರ  ಚಾಲಿತ  ಎಣ್ಣೆಗಾಣಗಳು, ಹಿಟ್ಟಿನ ಗಿರಣಿ, ರೊಟ್ಟಿ ಮಷಿನ್, ಪಶು ಆಹಾರ ತಯಾರಿಕಾ ಘಟಕಗಳನ್ನು ರೈತರಿಗೆ ಸಹಾಯಧನದಡಿ  ವಿತರಿಸಲಾಗುತ್ತಿದೆ.  ಆಸಕ್ತ ಸಾಮಾನ್ಯ ವರ್ಗದ ರೈತರು ದಿನಾಂಕ 08.03.2023 ರೊಳಗೆ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ  ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಹೊನ್ನಾಳಿ ಸಹಾಯಕ ಕೃಷಿ ನಿರ್ದೇಶಕರು ಕೋರಿದ್ದಾರೆ.

error: Content is protected !!