ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವವು ಇದೇ ದಿನಾಂಕ 7ರ ಮಂಗಳವಾರ ರಾತ್ರಿ 12 ಗಂಟೆಗೆ ನಡೆಯಲಿದ್ದು, ರಥೋತ್ಸವದ ಪ್ರಯುಕ್ತ ಇಂದಿನಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಇಂದು ರಾತ್ರಿ ಪಾಲ್ದಾರ ಗೌಡ್ರು ಕನ್ನಪ್ಪಳ ಮನೆತನದವರಿಂದ ಶ್ರೀ ಸ್ವಾಮಿಗೆ ಅರಿಶಿಣ ಎಣ್ಣೆ, ಉಚ್ಚಾಯ ಕಾರ್ಯ ಜರುಗಲಿದೆ.
ದಿನಾಂಕ 5ರ ಭಾನುವಾರ ರಾತ್ರಿ ಬಣಕಾರ ಮನೆತನದವರಿಂದ ಶ್ರೀ ಸ್ವಾಮಿಗೆ ಅರಿಶಿಣ ಎಣ್ಣೆ, ಉಚ್ಚಾಯ ಕಾರ್ಯ ನಡೆಯಲಿದೆ.
ದಿನಾಂಕ 6ರ ಸೋಮವಾರ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ಸ್ವಾಮಿಯು ದೊಡ್ಡಬಾತಿಗೆ ದಯಮಾಡಿಸುವುದು.
ದಿನಾಂಕ 8ರ ಬುಧವಾರ ರಾತ್ರಿ ಓಕಳಿ ಜರುಗಲಿದೆ.