ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮೇಯರ್ ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾದ ಉಪ ಮೇಯರ್ ಸ್ಥಾನಗಳಿಗೆ ಮಧ್ಯಾಹ್ನ 12ರಿಂದ 1ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಮಧ್ಯಾಹ್ನ 3ರಿಂದ ಸಭೆ ಆರಂಭವಾಗಲಿದೆ.
ಚುನಾವಣಾಧಿಕಾರಿಯಾಗಿ ಬೆಂಗ ಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಕಾರ್ಯ ನಿರ್ವಹಿಸಲಿದ್ದಾರೆ.
ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ, ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಇಲ್ಲದ ಕಾರಣ ಅಧಿಕಾರ ಬಿಟ್ಟುಕೊಡುವ ಅನಿವಾ ರ್ಯತೆ ಬಂದೊದಗಿದೆ. ಕಾಂಗ್ರೆಸ್ ಸದಸ್ಯರ ಪೈಕಿ ಐವರು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು.
7ನೇ ವಾರ್ಡ್ ಸದಸ್ಯ ವಿನಾಯಕ ಪೈಲ್ವಾನ್, 20ನೇ ವಾರ್ಡ್ನ ಮೀನಾಕ್ಷಿ ಜಗದೀಶ, 31ನೇ ವಾರ್ಡ್ನ ಪಾಮೇನಹಳ್ಳಿ ನಾಗರಾಜ, 35ನೇ ವಾರ್ಡ್ನ ಸವಿತಾ ಗಣೇಶ ಹುಲ್ಮನಿ ಹಾಗೂ 43ನೇ ವಾರ್ಡ್ನ ಶಾಮನೂರು ನಾಗರಾಜ ಕಲ್ಲಳ್ಳಿ ಹೀಗೆ ಐವರು ಸದಸ್ಯರಿದ್ದಾರೆ.