ಭಾರತ್ ಕಾಲೋನಿಯ ಒಂದನೇ ಮೇನ್, ಎರಡನೇ ಕ್ರಾಸ್ನಲ್ಲಿರುವ ಶ್ರೀ ಓಂ ಶಕ್ತಿ ನೂತನ ದೇವಸ್ಥಾನ ಇಂದು ಉದ್ಘಾಟನೆಗೊಳ್ಳಲಿದೆ.
ಇಂದು ಬೆಳಿಗ್ಗೆ 5 ಕ್ಕೆ ಅಮ್ಮನವರಿಗೆ ಸುಪ್ರಭಾತ ಹಾಗೂ ಬೆಳಿಗ್ಗೆ 9 ಗಂಟೆಗೆ ಕಳಸ ದೀಪ, ಯಾಗ ಪೂಜೆ, ಬೆಳಿಗ್ಗೆ 11 ಗಂಟೆಗೆ ಶ್ರೀ ಲಿಂಗೇಶ್ವರ ಸ್ವಾಮಿ ದೇವ ಸ್ಥಾನದಿಂದ ಮೆರವಣಿಗೆ ಮೂಲಕ ಅಮ್ಮ ನವರ ಭಾವಚಿತ್ರ ಇರುವ ಫೋಟೋವನ್ನು ದೇವಸ್ಥಾನಕ್ಕೆ ತರಲಾಗುವುದು. ಮಧ್ಯಾಹ್ನ 1 ಗಂಟೆಗೆ ಅನ್ನ ಸಂರ್ಪಣೆ ಏರ್ಪಾಡಾಗಿದೆ.