ಲಿಂಗದಹಳ್ಳಿಯಲ್ಲಿ ನಾಡಿದ್ದು ಸಾಮೂಹಿಕ ವಿವಾಹಗಳು

ರಾಣೇಬೆನ್ನೂರು, ಫೆ. 2- ತಾಲ್ಲೂಕಿನ ಸ್ಪಟಿಕ ಲಿಂಗದ ಸುಕ್ಷೇತ್ರ ಲಿಂಗದಹಳ್ಳಿ ಹಿರೇಮಠದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿಮಹೊತ್ಸವ, ಲೀಗದೀಕ್ಷೆ, ಸಾಮೂಹಿಕ ವಿವಾಹಗಳು, ರಥೋತ್ಸವ, ಗುಗ್ಗುಳ ಕಾರ್ಕ್ರಮಗಳು ದಿನಾಂಕ 5 ರಂದು ಕೂಡಲದ ಗುರು ನಂಜೇಶ್ವರ ಮಠದ ಶ್ರೀ ಮಹೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿವೆ ಎಂದು ಪೀಠಾಧಿಪತಿ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ತಿಪ್ಪಾಯಿಕೊಪ್ಪದ ಶ್ರೀ ವಿರುಪಾಕ್ಷ ಮಹಾಸ್ವಾಮಿಗಳು, ಕಂಕಳ್ಳಿ ಶ್ರೀ ಸೋಮಶೇಖರಯ್ಯ ಮಹಾಸ್ವಾಮಿಗಳು,ನರಸಾಪುರದ ಶಿವಕುಮಾರ ಶಿವಶರಣರು ಆಗಮಿಸುವರು. ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಅವರ ಪ್ರತಿಭಾ ಪ್ರದರ್ಶನ ಹಾಗೂ ಸನ್ಮಾನ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ ವಹಿಸುವರು. ಅಂದು ಧಾರ್ಮಿಕ ವಿಧಿವಿಧಾನಗಳು ನಡೆದ ನಂತರ ನಡೆಯುವ ಧರ್ಮ ಸಭೆಯನ್ನು ವಿಪ ಸದಸ್ಯ ಆರ್. ಶಂಕರ್ ಉದ್ಘಾಟಿಸುವರು. ಶಾಸಕ ಅರುಣ ಕುಮಾರ, ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ, ಕೈಗಾರಿಕಾ ನಿಗಮದ ನಿರ್ದೇಶಕಿ ಭಾರತಿ ಅಳವಂಡಿ, ಸಾರಿಗೆ ಸಂಸ್ಥೆ ಅಧ್ಯಕ್ಷ ಬಸವರಾಜ ಕೇಲಗಾರ,  ನಿವೃತ್ತ ಪೋಲಿಸ್ ಅಧಿಕಾರಿ ಶಂಕರ ಬಿದರಿ ಮತ್ತಿತರರು ಆಗಮಿಸುವರು.

error: Content is protected !!