ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಇಂದು ರಾತ್ರಿ 12 ಗಂಟೆಗೆ ಜರುಗಲಿದೆ. ನಾಳೆ ದಿನಾಂಕ 2ರ ಗುರುವಾರ ಬೆಲ್ಲದ ಬಂಡಿ, ನಾಡಿದ್ದು ದಿನಾಂಕ 3ರ ಶುಕ್ರವಾರ ಓಕಳಿ ಕಾರ್ಯಕ್ರಮ ನಡೆಯಲಿದೆ. ದಿನಾಂಕ 3ರ ರಾತ್ರಿ 9.30ಕ್ಕೆ ಶ್ರೀ ಮಾರುತಿ ನಾಟ್ಯ ಕಲಾ ಸಂಘದಿಂದ `ಗರ್ಭದಲ್ಲಿ ಗರ್ಜಿಸಿದ ಗರುಡ’ ಅರ್ಥಾತ್ `ತಾಯಿಯ ಋಣ ತೀರಿಸಿದ ಮಗ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
January 18, 2025