ಜಿಎಂಐಟಿ ಕಾಲೇಜಿಗೆ ನಾಲ್ಕು ರ‍್ಯಾಂಕ್‌

ಜಿಎಂಐಟಿ ಕಾಲೇಜಿಗೆ ನಾಲ್ಕು ರ‍್ಯಾಂಕ್‌ - Janathavani

ಐಎಸ್ ವಿಭಾಗಕ್ಕೆ 1 ಮತ್ತು ಬಿಟಿ ವಿಭಾಗಕ್ಕೆ 3 ರ‍್ಯಾಂಕ್‌ ಗಳು

ದಾವಣಗೆರೆ, ಫೆ. 27- ಬೆಳಗಾವಿಯ ವಿಶ್ವೇ ಶ್ವರಾಯ ಟೆಕ್ನಾಲಜಿಕಲ್ ಯೂನಿವರ್ಸಿಟಿ 2022ರ ಸಾಲಿನ ಇಂಜಿನಿಯರಿಂಗ್ ವಿಭಾಗದ ರ‍್ಯಾಂಕ್‌ ಗಳನ್ನು ಬಿಡುಗಡೆ ಮಾಡಿದ್ದು, ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದಲ್ಲಿ 4 ರಾಂಕ್‌ಗಳನ್ನು ಪಡೆದುಕೊಂಡಿದೆ. ಇನ್ಫಾರ್ಮೇ ಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಲ್ಲಿ ಹೆಚ್.ಬಿ. ನಿಕಿತಾ 6ನೇ ರ‍್ಯಾಂಕ್‌ ಪಡೆದಿದ್ದು, ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದಿಂದ ಬಿ.ಎಂ. ನಿವೇದಿತಾ, ಕೆ.ಇ. ಪಲ್ಲವಿ  ಮತ್ತು ಭೂಮಿಕಾ ಕ್ರಮವಾಗಿ 4ನೇ, 5ನೇ ಮತ್ತು 7ನೇ ರ‍್ಯಾಂಕ್‌ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಬಿ. ಸಂಜಯ್ ಪಾಂಡೆ ತಿಳಿಸಿದ್ದಾರೆ.

error: Content is protected !!