ಹಳೆ ಕುಂದುವಾಡದಲ್ಲಿ ಇಂದು ಕರಿಬಸವೇಶ್ವರ ಅಜ್ಜಯ್ಯನವರ ಬೆಳ್ಳಿ ಮೂರ್ತಿ ಪಲ್ಲಕ್ಕಿ

ಹಳೆ ಕುಂದುವಾಡದಲ್ಲಿ ಇಂದು ಕರಿಬಸವೇಶ್ವರ ಅಜ್ಜಯ್ಯನವರ ಬೆಳ್ಳಿ ಮೂರ್ತಿ ಪಲ್ಲಕ್ಕಿ - Janathavaniಹಳೇ ಕುಂದುವಾಡದ ಶ್ರೀ ಸದ್ಗುರು ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ  ಮಹಾ ಶಿವರಾತ್ರಿ ಕಾರ್ಯಕ್ರಮಗಳು ಆರಂಭಗೊಂ ಡಿದ್ದು, ಇದೇ ದಿನಾಂಕ 27 ರವರೆಗೆ ನಡೆಯಲಿವೆ ಎಂದು ಧರ್ಮಾಧಿಕಾರಿ ಜೆ. ರಾಜಣ್ಣ ತಿಳಿಸಿದರು.

ಇಂದು ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ, ಬೆಳಿಗ್ಗೆ 7.30 ಕ್ಕೆ ಗುಗ್ಗಳ ಕಾರ್ಯ ನೆರವೇರಲಿದೆ. ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ದೇವರಬೆಳಕೆರೆ ಚಮನ್ ಅಜ್ಜ ಉಪಸ್ಥಿತರಿರುವರು. ಸಂಜೆ 7 ಕ್ಕೆ  ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನವರ ಬೆಳ್ಳಿ ಮೂರ್ತಿ ಪಲ್ಲಕ್ಕಿ ಜರುಗಲಿದ್ದು, ವೇದಿಕೆ ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ಜರುಗಲಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಸ್.ಎಸ್. ಮಲ್ಲಿಕಾರ್ಜುನ್, ಎಸ್.ಎಸ್. ಗಣೇಶ್, ಜಿ.ಎಂ. ಸಿದ್ದೇಶ್ವರ, ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಶಿವಾನಂದ ಕಾಪಶಿ, ಸಿ.ಬಿ. ರಿಷ್ಯಂತ್, ಪಿ.ಎನ್. ಲೋಕೇಶ್,  ಜಯಮ್ಮ ಗೋಪಿ ನಾಯ್ಕ,  ಗಾಯತ್ರಿಬಾಯಿ ಖಂಡೋ ಜಿರಾವ್, ಶಿಲ್ಪಾ ಜಯಪ್ರಕಾಶ್, ಎ.ವೈ. ಪ್ರಕಾಶ್, ಬಸವನಗೌಡ ಕೋಟೂರು, ರೇಣುಕಾ, ತಹಶೀಲ್ದಾರ್ ಅಶ್ವತ್ಥ್‌, ಎನ್.ಹೆಚ್. ಶಶಿಕಲಾ,  ಲಕ್ಷ್ಮೀ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್ ಮತ್ತಿತರರು ಭಾಗಹಿಸಲಿದ್ದಾರೆ.

error: Content is protected !!