ದಾವಣಗೆರೆ, ಫೆ. 19 – ನಗರದ ಹೈಸ್ಕೂಲ್ ಮೈದಾನದಲ್ಲಿ ನಾಳೆ ದಿನಾಂಕ 20ರ ಸೋಮವಾರ ಸಂಜೆ 5ರಿಂದ 1008 ದಂಪತಿಗಳು ಏಕಕಾಲದಲ್ಲಿ ಲಿಂಗ ಪೂಜೆ ಮಾಡಲಿದ್ದಾರೆ ಎಂದು ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ರುದ್ರೇಶ್ವರ ಸ್ವಾಮೀಜಿ ಲಿಂಗಪೂಜೆ ನೆರವೇರಿಸಲಿದ್ದಾರೆ. ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಶಿವರಾತ್ರಿ ಸಂದೇಶ ನೀಡುವರು. ಉದಯಶಂಕರ ಶಾಸ್ತ್ರಿಗಳ ತಂಡದಿಂದ ರುದ್ರ ಪಠಣ ನೆರವೇರಲಿದೆ.
ಈಶ್ವರನ ಆರಾಧನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ 8ರಿಂದ 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ 18 ಸಂಘಟನೆಗಳು ಜೊತೆಯಾಗಿವೆ ಎಂದು ತಿಳಿಸಿದರು.
ಜಿ.ಎಂ. ಸಿದ್ದೇಶ್ವರ, ಶಾಮನೂರು ಶಿವಶಂಕರಪ್ಪ, ಎಸ್.ಎ. ರವೀಂದ್ರನಾಥ್, ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಮನೋಹರ ಮಠದ್, ಶಿವಾನಂದ ಕಾಪಶಿ, ಸಿ.ಬಿ. ರಿಷ್ಯಂತ್, ಡಾ. ಎ. ಚನ್ನಪ್ಪ ಭಾಗವಹಿಸುವರು.
ಪತ್ರಿಕಾಗೋಷ್ಠಿಯಲ್ಲಿ ಮಯೂರ್, ಬಕ್ಕೇಶ್, ಗಾಯತ್ರಿ, ರೇಖಾ ಸಂಜೀವ್, ಬೂಸನೂರು ಜಯಕುಮಾರ್ ಸುಜಾತ, ಅನಿಲ್, ಜೀವನ್, ಆನಂದ್, ಅಮರ್, ಶ್ರೀಕಾತ್ ಮತ್ತಿತರರು ಉಪಸ್ಥಿತರಿದ್ದರು.