ದಾವಣಗೆರೆ, ಫೆ.16- ನಗರದ ಶ್ರೀ ಲಿಂಗೇಶ್ವರ ದೇವಸ್ಥಾನದ ಬಳಿ ರೈಲ್ವೆ ಅಂಡರ್ ಬಿಡ್ಜ್ ಕೆಲಸವು ತೀರಾ ಮಂದಗತಿಯಲ್ಲಿ ಸಾಗಿದ್ದು, ಕೆಲಸಕ್ಕೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸುವಂತೆ ಸಾಮಾಜಿಕ ಸೇವಾ ಕಾರ್ಯ ಕರ್ತರಾದ ಜೆ. ಸೋಮನಾಥ್ ಆಗ್ರ ಹಿಸಿದ್ದಾರೆ. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಓಡಾಡಲು ಜಾಗವಿಲ್ಲದಂತಾಗಿದೆ. ಶಿವರಾತ್ರಿ ಹತ್ತಿರ ದಲ್ಲಿರುವುದರಿಂದ ಲಿಂಗೇಶ್ವರ ದೇವಸ್ಥಾನಕ್ಕೆ ವಿಪರೀತ ಜನ ಬರುತ್ತಾರೆ ಹಾಗಾಗಿ ಬಿಡ್ಜ್ ಕೆಲಸವನ್ನು ಬೇಗನೆ ಪೂರೈಸುವಂತೆ ಒತ್ತಾಯಿಸಿದ್ದಾರೆ.
January 19, 2025