ಚನ್ನಗಿರಿ, ಫೆ. 14- ತಾಲ್ಲೂಕಿನ ಹರನಹಳ್ಳಿ- ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ನಾಳೆ ದಿನಾಂಕ 15 ರಿಂದ 20ರವರೆಗೆ ಶಿವರಾತ್ರಿ ಸಪ್ತಾಹ ಮಹೋತ್ಸವ ನಡೆಯಲಿದೆ.
ಈ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಅವರಿಂದ ಮುಳ್ಳುಗದ್ದುಗೆ ಉತ್ಸವ, ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ, ಅಡ್ಡಪಲ್ಲಕ್ಕಿ ಉತ್ಸವ ಜರುಗಲಿವೆ.
ನಾಳೆ ದಿನಾಂಕ 15ರಂದು ಧರ್ಮ ಧ್ವಜಾರೋಹಣ, ಅನ್ನ ದಾಸೋಹದ ಅಕ್ಕಿ ಪೂಜೆ, ಕೆಂಗಾಪುರ ಗ್ರಾಮದ ಒಳಮಠದಲ್ಲಿ ಕರ್ತೃಗದ್ದುಗೆಗೆ ಪೂಜೆ ಸಲ್ಲಿಸಿ, ಹರನಹಳ್ಳಿಯಲ್ಲಿರುವ ಬೃಹನ್ಮಠಕ್ಕೆ ಉತ್ಸವದ ಮೂಲಕ ತೆರಳಿ ಅಲ್ಲಿನ ರಾಮಲಿಂಗೇಶ್ವರ ಸ್ವಾಮಿ ಗದ್ದುಗೆಗೆ ಪೂಜೆ ಸಲ್ಲಿಸಲಾಗುವುದು. 18 ರಂದು ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ, ನಾಗದ್ದುಗಳ ಉತ್ಸವ, ಬ್ರಹ್ಮ ಮಾಲೆಗಳ ವಿತರಣೆ, ಸಂಜೆಯಿಂದ ಅಥಣಿಯ ರಾಮಲಿಂಗೇಶ್ವರ ಕಲಾ ತಂಡದಿಂದ ಸಂಗೀತ, ವಿದ್ಯಾಸಂಸ್ಥೆಯ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 19ರ ಬೆಳಿಗ್ಗೆ 6 ರಿಂದ ಹರನಹಳ್ಳಿಯ ಹೊರ ಮಠದಿಂದ ಕೆಂಗಾಪುರದ ಒಳಮಠದವರೆಗೆ ರಾಮಲಿಂಗೇಶ್ವರ ಸ್ವಾಮೀಜಿಯವರ ಮುಳ್ಳುಗದ್ದುಗೆಯ ಅದ್ಧೂರಿ ಉತ್ಸವ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು.
ನಂತರ 10.30 ರಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ನಡೆಯಲಿದೆ. ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ರಾಮಲಿಂಗೇಶ್ವರ ಸ್ವಾಮೀಜಿ ಹಾಗು ವಿವಿಧ ಮಠಾಧೀಶರು ಪಾಲ್ಗೊಳ್ಳುವರು. 20ರಂದು ರಾಮಲಿಂಗೇಶ್ವರ ಸ್ವಾಮೀಜಿಯವರಿಂದ ಆಶೀರ್ವಚನ ನಂತರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಎಂದು ಮಠದ ವ್ಯವಸ್ಥಾಪಕ ಹೆಚ್.ಆರ್. ವಿಜಯಕುಮಾರ್ ತಿಳಿಸಿದ್ದಾರೆ.